ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಿಲ್ಲೆಯಲ್ಲೇ ಪ್ರಥಮ ಭಾರಿಗೆ ಶಾಸಕರಿಂದ ಗ್ರಾಮ ವಾಸ್ತವ್ಯ

Srinivasa Murthy VN
Updated On : 13 Nov 2013, 12:11 pm

ಟೇಕಲ್ ಲಕ್ಷ್ಮೀಶ್
ಟೇಕಲ್:
ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಾಲೂರು ಶಾಸಕ ಕೆ.ಎಸ್. ಮಂಜುನಾಥಗೌಡರು ಸಮೀಪದ ಬನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿ ಜನರ ಕುಂದುಕೊರತೆಗಳನ್ನು ವಿಚಾರಣೆ ನಡೆಸಿದ್ದು ವಿಶೇಷವಾಗಿತ್ತು.
ಬನಹಳ್ಳಿ ಗ್ರಾಮದ ಪಂಚಾಯ್ತಿ ಅರಳಿಕಟ್ಟೆ ಮೇಲೆ ಶನಿವಾರ ರಾತ್ರಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ವಿಚಾರಣೆ ಆರಂಭಿಸಿದಾಗ ಗ್ರಾಮಕ್ಕೆ ಬಸ್ಸಿನ ಸಂಚಾರ ಬೇಕೆಂದು ಹಾಗೂ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
 ಸರ್ಕಾರಿ ಶಾಲೆಯಲ್ಲಿ ಕೆಲವು ಶಿಕ್ಷಕರು ಗೈರು ಹಾಜರಾಗುತ್ತಿದ್ದು ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ ಎಂದು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದರುಪ್ರಯೋಜನವಾಗಿಲ್ಲವೆಂದು ಗೂರಿದರು.
ಶಾಸಕ ಮಂಜುನಾಥಗೌಡ ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿದ ನಂತರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಗ್ರಾಮವಾಸ್ತವ್ಯದ ರೀತಿಯಲ್ಲಿ ತಾನು ಗ್ರಾಮೀಣ ಜನರ ಕುಂದು ಕೊರತೆ ತಿಳಿದು ನಿವಾರಿಸಲು ಗ್ರಾಮವಾಸ್ತವ್ಯ ಮಾಡುತ್ತಿದ್ದು ತಿಂಗಳಿಗೊಮ್ಮೆ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು.
ಬನಹಳ್ಳಿ ಗ್ರಾಮದ ರೈತರೊಬ್ಬರ ಮನೆಯಲ್ಲಿ ಶಾಸಕರು ರಾಗಿ ಮುದ್ದೆ ಊಟವನ್ನು ಎಲ್ಲರ ಜೊತೆ ಸಾಮೂಹಿಕವಾಗಿ ಬೆರೆತು ಮಾಡಿದರು. ರಾತ್ರಿ ಸುಮಾರು 1-30 ಗಂಟೆಯವರೆಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸ್ಥಳದಲ್ಲೆ ಕೆಲವು ಸಮಸ್ಯೆಗಳಿಗೆ ಪರಿಹಾರೋಪಾಯ ನೀಡುತ್ತಿದ್ದರು.
ಶಾಸಕರ ಜೊತೆ ಕೆ.ವೈ. ನಂಜೇಗೌಡ, ಆನೇಪುರದ ಹನುಮಂತಪ್ಪ, ಬಿ.ಜಿ. ಮುನಿಶಾಮಿಗೌಡ, ಬಿ.ಜಿ. ಸತೀಶ್, ಎಸ್.ಜಿ. ರಾಮಮೂರ್ತಿ, ಮಿಟ್ಟಿಗಾನಹಳ್ಳಿ ರಾಮಕೃಷ್ಣಪ್ಪ, ಕ್ಷೇತ್ರೇನಹಳ್ಳಿ ರಾಮಕೃಷ್ಣಪ್ಪ, ಬನಹಳ್ಳಿ ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷ ಪೆಡವನಹಳ್ಳಿ ನಂಜಪ್ಪ, ಕೆ.ಬಿ.ನಾರಾಯಣಸ್ವಾಮಿ, ಟೇಕಲ್ ಆಂಜಿನಪ್ಪ, ಹನುಮಪ್ಪ, ಕ್ಷೇತ್ರೇನಹಳ್ಳಿ ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement