ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಿದ್ಧತೆಯಿಲ್ಲದ ಅಧಿಕಾರಿಗಳು: ಸಭೆ ಮುಂದೂಡಿಕೆ

Srinivasa Murthy VN
Updated On : 15 Nov 2013, 12:55 pm

ಬಂಗಾರಪೇಟೆ: ಅಟ್ರಾಸಿಟಿ ಸಭೆಗೆ ಅಧಿಕಾರಿಗಳು ಸಿದ್ಧತೆಯಿಲ್ಲದೆ ಆಗಮಿಸಿದ್ದರಿಂದ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಭೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಿದರು. ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಅಟ್ರಾಸಿಟಿ ಸಭೆ ಪ್ರಾರಂಭದಲ್ಲೇ ದಲಿತ ಮುಖಂಡರಾದ ರಾಜಪ್ಪ, ಸೂಲಿಕುಂಟೆ ಆನಂದ್, ದೇವರಾಜ್, ಅಜಿತ್ ಕುಮಾರ್ ಎದ್ದು ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕೆಂದು ಸರ್ಕಾರ ಆದೇಶವಿದೆಯಾದರೂ ಅದನ್ನು ಅಧಿಕಾರಿಗಳು ಪಾಲಿಸದೆ ನಿರ್ಲಕ್ಷ್ಯ ಮಾಡಲಾಗುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರಗಳು ಯಾವುದನ್ನು ಪಾಲಿಸಲಾಗಿದೆ ತಿಳಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಕೇಳಿದ ಪ್ರಶ್ನೆಗೆ ತಾನು ಹೊಸದಾಗಿ ಅಧಿಕಾರ ವಹಿಸಿಕೊಳ್ಳಾಗಿದೆ ಎಂಬ ಜಾರಿಕೆ ಉತ್ತರ ನೀಡಿದ್ದರಿಂದ ಸಭೆಯಲ್ಲಿದ್ದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾಲಕಾಲಕ್ಕೆ ಅಟ್ರಾಸಿಟಿ ಸಭೆ ನಡೆಯುತ್ತಿಲ್ಲ ಇನ್ನು ಮುಂದೆ ಇಂತಹ ತಪ್ಪುಗಳು ಮರುಕಳಿಸದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ಕಡ್ಡಾಯವಾಗಿ ನಡೆಸುವಂತೆ ತಹಸೀಲ್ದಾರ್ ಉಷಾರವರಿಗೆ ಸೂಚಿಸಿ ಮುಂದಿನ ಸಭೆಗೆ ಸಿದ್ಧತೆಯೊಂದಿಗೆ ಆಗಮಿಸುವಂತೆ ಹೇಳಿ ಸಭೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಿದರು. ತಹಸೀಲ್ದಾರ್ ಉಷಾ, ಡಿವೈಎಸ್ಪಿ ರಾಜಣ್ಣ, ವೃತ್ತ ನಿರೀಕ್ಷಕ ವೆಂಕಟಾಚಲಪತಿ, ನರಸಿಂಹಮೂರ್ತಿ, ಬಿಇಒ ಕೆ. ಜಯರಾಜ್, ಎಂ.ಎಸ್. ಭಾರದ್ವಾಜ್ ಇದ್ದರು.

ನರೇಗಾ ಸದುಪಯೋಗವಾಗಲಿ: ಕೆ. ಮಂಜುನಾಥ್
ಶಿಡ್ಲಘಟ್ಟ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಮೇಲೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ. ಮಂಜುನಾಥ್ ಹೇಳಿದರು. ತಾಲೂಕಿನ ಮೇಲೂರು ಗ್ರಾಪಂ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಗ್ರಾಮಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಎಲ್ಲಾ ವರ್ಗದ ಜನರೂ ಪಡೆದುಕೊಳ್ಳಬಹುದಾಗಿದೆ ಎಂದರು. ನೋಡಲ್ ಅಧಿಕಾರಿ ಗುರುಬಸಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮುನಿರತ್ನಮ್ಮ, ಉಪಾಧ್ಯಕ್ಷೆ ರೇಣುಕಾ, ಸದಸ್ಯರಾದ ರೂಪೇಶ್, ಲಲಿತಮ್ಮ, ಕಾರ್ಯದರ್ಶಿ ಪಿ.ವಿ. ಸಿಧ್ದಣ್ಣ, ಜಿ.ಎಂ. ಜನಾರ್ದನ, ಜಯದೇವ, ಸೂರ್ಯನಾರಾಯಣಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement