ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಶಾಲಾ ಶೌಚಾಲಯ ನಿರ್ವಹಣೆ ಗ್ರಾಪಂಗಳಿಗೆ ಒಪ್ಪಿಸಿ'

Srinivasa Murthy VN
Updated On : 17 Nov 2013, 12:14 pm

ಕೋಲಾರ: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಶೌಚಾಲಯಗಳ ಸ್ವಚ್ಛತೆಗಾಗಿ ರು. 1000 ನೀಡಲು ಸಿದ್ಧವಿದ್ದರೂ ಯಾರು ಮುಂದೆ ಬರುತ್ತಿಲ್ಲ. ಬದಲಿಗೆ ಸರ್ಕಾರಿ ಆದೇಶದಲ್ಲಿ ಶಾಲಾ ಮಕ್ಕಳಿಂದ ಯಾವುದೇ ಕೆಲಸ ಮಾಡಿಸಬಾರದೆಂಬ ಸೂಚನೆ ಇದ್ದು, ಈ ಕೆಲಸ ನಿರ್ವಹಿಸಲು ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ ಬದಲಿಗೆ ಪ್ರಾಥಮಿಕ ಶಾಲೆಗಳಲ್ಲಿರುವ ಶೌಚಾಲಯಗಳ ಸ್ವಚ್ಛತೆ ನಿರ್ವಹಣೆಯನ್ನು ಗ್ರಾಪಂಗಳಿಗೆ ವಹಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಜಿಲ್ಲಾಧ್ಯಕ್ಷ ಕೆ.ಎನ್. ಮಂಜುನಾಥ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ. ಪದ್ಮನಾಭ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಉಪನಿರ್ದೇಶಕರು ಶೌಚಾಲಯಗಳ ಸ್ವಚ್ಛತೆ ಗ್ರಾಪಂಗೆ ವಹಿಸಲು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು. ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉಪನಿರ್ದೇಶಕರಿಗೆ ಸಲ್ಲಿಸಲಾಯಿತು. ಕೆ.ಆರ್. ಅಶೋಕ್, ವೆಂಕಟಶಿವಪ್ಪ, ಎಂ. ನಾಗರಾಜ್, ಎಂ.ಎಸ್.ಶ್ರೀನಿವಾಸ್ ಮೂರ್ತಿ, ಕೆ.ಟಿ. ನಾಗರಾಜ್, ಎನ್. ನಾರಾಯಣಸ್ವಾಮಿ, ಡಿ.ಆರ್. ವೆಂಕಟರಾಮೇಗೌಡ, ಶೇಕ್ ಫಯಾಜುದ್ದೀನ್, ವೇಮಗಲ್ ಮುನಿರಾಜು, ವಿ.ಎನ್.ಶ್ರೀನಿವಾಸ್, ಸಿ.ಬಿ. ವಿಜಯಕುಮಾರ್, ಎಂ. ಮುನಿಯಪ್ಪ ಇದ್ದರು.

ಅಂಗನವಾಡಿ ಕೇಂದ್ರಗಳ ಸೌಲಭ್ಯಕ್ಕೆ ಆಗ್ರಹಿಸಿ ಧರಣಿ
ಬಂಗಾರಪೇಟೆ: ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಮೂಲ ಸೌಲಭ್ಯಗಳಲ್ಲಿದೆ ಸೊರಗಿದ್ದು, ಶಿಶುಗಳ ಹಾಜರಾತಿ ಕ್ಷೀಣಿಸಿತ್ತಿದೆ. ಕೂಡಲೆ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಆತ್ಮವಿಶ್ವಾಸ ವೇದಿಕೆ ಮುಖಂಡರು ಸಿಡಿಪಿಒ ಕಚೇರಿ ಮುಂದೆ ಧರಣಿ ನಡೆಸಿದರು. ತಾಲೂಕುನ ಬಹುತೇಕ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಶೌಚಾಲಯವಿಲ್ಲ, ಕುಡಿಯುವ ನೀರೂ ಲಭ್ಯವಿಲ್ಲದೆ ಪರದಾಡುವಂತಾಗಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಬೇಕು, ಮಕ್ಕಳ ಪೋಷಣೆಗಾಗಿ ಆಯಾಗಳನ್ನು ನೇಮಕ ಮಾಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ವೇದಿಕೆ ರಾಜ್ಯಧ್ಯಕ್ಷ ಎಂ.ಎನ್. ಭಾರದ್ವಾಜ್,ನಯಾಜ್, ಶೇಖರ್, ಸಂಜೀವಪ್ಪ, ವಿಶಾಲಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement