ಮಕ್ಕಳ ದಿನಾಚರಣೆ
ಚಿಂತಾಮಣಿ: ಮಕ್ಕಳನ್ನು ಗೌರವಿಸಿದರೆ ಅವರು ನಮ್ಮನ್ನು ಗೌರವಿಸುತ್ತಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಬಿ. ಹನುಮಂತಪ್ಪ ತಿಳಿಸಿದರು.
ತಾಲೂಕಿನ ಮೈಲಾಂಡ್ಲಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಕ್ಕಳಿಂದ ನಾವು ಮಕ್ಕಳಿಗಾಗಿ ನಾವು ಎಂಬುದನ್ನು ಮನಗೊಂಡು ಮಕ್ಕಳೊಂದಿಗೆ ಬೆರೆತು ನಡೆದರೆ ಭವಿಷ್ಯವು ಉಜ್ವಲಗೊಳ್ಳುತ್ತದೆ ಎಂದರು. ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪಧರ್ಝೆ, ಶುದ್ಧ ಬರವಣಿಗೆ, ಸ್ಪಷ್ಟ ಓದು, ರಂಗೋಲಿ, ಚಿತ್ರಕಲೆ, ಜನಪದ ಗೀತೆ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಹಸೀನಾ ಬೇಗಂ, ಸಹ ಶಿಕ್ಷಕರಾದ ಎಸ್.ಪಿ. ರಮೇಶ್, ಎಚ್.ಎ. ಲಾವಣ್ಯ, ಮಾರಪ್ಪರೆಡ್ಡಿ, ಮುನಿಯಮ್ಮ, ರಾಧಮ್ಮ, ಮುನಿಯಪ್ಪ, ಎಂ.ಎನ್. ಕೇಶವಮೂರ್ತಿ ಇದ್ದರು.
ಸಹಕಾರ ಸಪ್ತಾಹ
ಗೌರಿಬಿದನೂರು: ಆಧುನಿಕ ಜಗತ್ತಿನಲ್ಲಿ ಗ್ರಾಮೀಣ ರೈತರ ಆರ್ಥಿಕ ಪುನರುತ್ಥಾನಕ್ಕೆ ಸಹಕಾರ ಸಂಸ್ಥೆಗಳು ಅತ್ಯವಶ್ಯ ಎಂದು ಕೋಚಿಮುಲ್ ನಿರ್ದೇಶಕ ಎಸ್.ವಿ. ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಹೆಗ್ಗೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ಆವರಣದಲ್ಲಿ 60 ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ ಸಹಕಾರ ಕ್ಷೇತ್ರದ ಸಂಘ ಸಂಸ್ಥೆಗಳಿಗೆ ದೋರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಮಳ್ಳೂರು ಶಿವಣ್ಣ ಮಾತನಾಡಿ, ಜಾಗತೀಕರಣ ಖಾಸಗೀಕರಣ ಉದಾರೀಕರಣ ಪ್ರಭಾವದಿಂದದಾಗಿ ಸಹಕಾರ ಸಂಸ್ಥೆಗಳಿಗೆ ಉಳಿಗಾಲವಿಲ್ಲದಂತಾಗಿದೆ ಎಂದರು. ಗೌರಿಬಿದನೂರು ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಆವುಲರೆಡ್ಡಿ ಮಾತನಾಡಿದರು. ಒಕ್ಕೂಟದ ನಿರ್ದೇಶಕ ಉಪ್ಪರಹಳ್ಳಿ ಎಂ. ನಾರಾಯಣಸ್ವಾಮಿ, ನಿರ್ದೇಶಕಿ ಸಾಕಮ್ಮ, ಎಸ್.ಪಿ. ಪುರುಶೋತ್ತಮ್, ಅಶ್ವಥಪ್ಪ, ಎಚ್.ಜಿ. ಕೃಷ್ಣಮೂರ್ತಿ, ಗೋಪಾಲಕೃಷ್ಣ ಇದ್ದರು.