'ರೈತರು ಸಂಘದ ಸದಸ್ಯತ್ವ ಪಡೆಯಿರಿ'
ಗೌರಿಬಿದನೂರು: ರೈತರ ಹಕ್ಕಿಗಾಗಿ ರೈತರು ಸದಸ್ಯತ್ವ ಪಡೆಯಬೇಕೆಂದು ರಾಜ್ಯ ರೈತಸಂಘದ ಜಿಲ್ಲಾಪ್ರಧಾನ ಕಾರ್ಯದರ್ಶಿ ಎಂ.ಆರ್. ಲಕ್ಷ್ಮೀನಾರಾಯಣ್ ತಿಳಿಸಿದರು.
ತಾಲೂಕಿನ ತೊಂಡೇಭಾವಿಯಲ್ಲಿ ಹೋಬಳಿ ಘಟಕದ ರೈತಸಂಘ ಉದ್ಘಾಟಿಸಿ ಮಾತನಾಡಿ, ತಾಲೂಕಿನ ಜನರಿಗೆ ಅನಿವಾರ್ಯವಾಗಿರುವ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಹೋರಾಟ ಮಾಡಲು ಎಲ್ಲರೂ ಬೆಂಬಲಿಸಬೇಕೆಂದರು.
ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ತೊಂಡೇಭಾವಿ ಘಟಕಕ್ಕೆ 200 ಜನ ಸದಸ್ಯತ್ವ ಪಡೆದಿದ್ದಾರೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿಲ್ಲವಾದ್ದರಿಂದ ಹೋರಾಟ ಮಾಡಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಬೇಕಿದೆ ಎಂದರು. ಗೌರವಾಧ್ಯಕ್ಷ ಮುದ್ದುರಂಗಪ್ಪ, ಅಶ್ವತ್ಥಪ್ಪ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸನತ್ ಕುಮಾರ್, ದಿನೇಶ್ ಕುಮಾರ್ ಮಹಮದ್ ಮಷೀರ್, ಜಯಪ್ರಕಾಶ್, ಸುರೇಶ್ ರೆಡ್ಡಿ, ಶಶಿಧರ್, ಸಹಕಾರ್ಯದರ್ಶಿ ಜಿ. ರಾಜಣ್ಣ ಇದ್ದರು.
ವಿದ್ಯುತ್ ಶಾಕ್; ವ್ಯಕ್ತಿ ಸಾವು
ಕೆಜಿಎಫ್: ನೀರಿನ ಸಂಪಿಗೆ ಅಳವಡಿಸಿದ್ದ ಮೋಟಾರು ರಿಪೇರಿ ಮಾಡಲು ಹೋಗಿದ್ದಾಗ ವಿದ್ಯುತ್ ತಂತಿ ತಗುಲಿ ಘಿಚ್ಎಎಲ್ ನೌಕರ ಮೃತಪಟ್ಟಿರುವ ಘಟನೆ ನಗರದ ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಂಪಿಯನ್ರೀಫ್ ವ್ಯಾಪ್ತಿಯ ಜಿ. ಬ್ಲಾಕ್ನ ಮ್ಯಾರಿಡ್ ಕ್ವಾರ್ಟಸ್ ನಿವಾಸಿ ಸಂತೋಷ್ಕುಮಾರ್(27) ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ದುರ್ದೈವಿ. ಸಂತೋಷ್ಕುಮಾರ್ ಬೆಂಗಳೂರಿನ ಹೆಚ್ಎಎಲ್ ನೌಕರನಾಗಿದ್ದು ಭಾನುವಾರ ಕೆಲಸಕ್ಕೆ ರಜೆಯಿದ್ದ ಕಾರಣ ಕೆಜಿಎಫ್ನ ತಮ್ಮ ಮನೆಗೆ ಬಂದಿದ್ದರು. ತಮ್ಮ ಮನೆಯಲ್ಲಿದ್ದ ನೀರಿನ ಸಂಪ್ಗೆ ಅಳವಡಿಸಿದ್ದ ಮೋಟರ್ ಕಳೆದ ಎರಡು ದಿನಗಳಿಂದ ಕೆಟ್ಟುಹೋಗಿದ್ದು ಅದನ್ನು ರಿಪೇರಿ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸಂತೋಷ್ಕುಮಾರ್ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.