ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಜಿ. ಶ್ರೀನಿವಾಸ್ ಆಯ್ಕೆ
ಕೋಲಾರ; ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಜಿ.ಶ್ರೀನಿವಾಸ್ ಆಯ್ಕೆಯಾಗಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪರಿಷತ್ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ. ಶ್ರೀನಿವಾಸ್ 16 ಮತಗಳನ್ನು ಪಡೆದು, ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಅವರ ಪ್ರತಿಸ್ಪರ್ಧಿ ರಮೇಶ್ ಭಟ್ ಕಲ್ಲೂರು ರವರು 4 ಮತಗಳನ್ನು ಪಡೆದು ಪರಾಜಿತಗೊಂಡರು. ಉಪಾಧ್ಯಕ್ಷರಾಗಿ ವಿ.ಪಿ. ಸೋಮಶೇಖರ್, ರಾಧಾ ಡಾ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪಿ. ನಾರಾಯಣಪ್ಪ, ಸಹ ಕಾರ್ಯದರ್ಶಿ ಟಿ. ಸುಬ್ಬರಾಮಯ್ಯ, ಖಜಾಂಚಿ ಸಿ. ರವೀಂದ್ರಸಿಂಗ್, ಸಂಘಟನಾ ಕಾರ್ಯದರ್ಶಿಪೋಸ್ಟ್ ನಾರಾಯಣಸ್ವಾಮಿ, ಡಿ. ಶಿವಕುಮಾರ್, ಶರಣಪ್ಪ ಗಬ್ಬೂರ್, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಡಾ. ಅನನ್ಯ ಲಕ್ಷ್ಮಿ, ಎನ್.ಸಿ. ರಾಜೇಶ್ವರಿ, ಜಂಟಿಕಾರ್ಯದರ್ಶಿಗಳಾಗಿ ಜಿ.ಟಿ. ರಾಮಚಂದ್ರಪ್ಪ, ಮಹೇಶ್ವರ ರಾವ್ ಕದಂ, ಪ್ರಚಾರ ಕಾರ್ಯದರ್ಶಿ ಬಿ.ಆರ್. ಲಕ್ಷ್ಮಣ್, ಪತ್ರಿಕಾ ಕಾರ್ಯದರ್ಶಿ ಎಚ್.ಆರ್. ಹರೀಶ್, ವಿಶೇಷ ಪ್ರತಿನಿಧಿಗಳಾಗಿ ದೇವರಾಜ್ ಅರಸು, ಡ್ಯಾನಿಡಾ ಕೃಷ್ಣಮೂರ್ತಿ, ವಿ.ಲಕ್ಷ್ಮಯ್ಯ, ಸೀಕಲ್ ನರಸಿಂಹಪ್ಪ, ಗೌರವ ಸದಸ್ಯರಾಗಿ ಕೋಲಾರ ಹಣಬೆ ಪಾಪೇಗೌಡ, ಬಂಗಾರಪೇಟೆ ಚಾಂದ್ ಪಾಷಾ, ಮುಳಬಾಗಿಲು ಕೆ.ಎಂ. ಶ್ರೀನಿವಾಸ್, ಶ್ರೀನಿವಾಸಪುರ ಡಾ. ವೇಣುಗೋಪಲಕೃಷ್ಣ ನಾಯಕ್, ಮಾಲೂರು ಡಾ.ನಾ. ಮುನಿರಾಜು ಹಾಗೂ ಗೌರವಾಧ್ಯಕ್ಷರಾಗಿ ಡಾ.ಕೆ.ಎಂ.ಜೆ. ಮೌನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದತ್ತಿ ಉಪನ್ಯಾಸ ಕಾರ್ಯಕ್ರಮ
ಕೆಜಿಎಫ್: ಸಮಾಜದಲ್ಲಿ ಮೌಢ್ಯವನ್ನು ವಿರೋಧಿಸಿ ಸನ್ಮಾರ್ಗವನ್ನು ತೋರಿಸಿದವರು ದಾಸರು ಮತ್ತು ಸಂತರುಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಶಂಕರ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಸೆಂತ್ ಜೋಸೆಫ್ ಬಾಲಕೀಯರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಡಿ. ಶಾರದಾಂಬ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಂತರಿಕ ಶುದ್ದಿಯೇ ನಿಜವಾದ ಶುದ್ದಿ. ದೇವರ ಭಕ್ತನಾಗುಲು ಸಾಧ್ಯ ಎಂಬುದನ್ನು ತಮ್ಮ ಆಚಾರಣೆ ಹಾಗೂ ಸಾಹಿತ್ಯದ ಮೂಲಕ ದಾಸರು ತೋರಿಸಿದ್ದಾರೆ ಎಂದು ಹೇಳಿದರು.
ಡಿ. ಶಾರದಾಂಬ ದತ್ತಿ ಉಪನ್ಯಾಸ ನೀಡಿ, ಜೀವನವನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಾಗ ಜೀವನ ಸಾರ್ಥಕವಾಗುತ್ತದ ಎಂದರು.
ಕೆಜಿಎಫ್ ಘಟಕದ ಕನ್ನಡ ಸಾಹತ್ಯ ಪರಿಷತ್ ಅಧ್ಯಕ್ಷ ವೀರವೆಂಕಟಪ್ಪ, ಸರಳತೆ ಹಾಗೂ ತ್ಯಾಗದಿಂದ ಸುಂದರ ಜೀವನವನ್ನು ರೂಪಿಸಿದವರು ದಾಸರು. ಅವರ ನಡೆನುಡಿಗಳು ಪ್ರತಿಯೊಬ್ಬರಿಗೆ ಆದರ್ಶವಾಗಿದೆ ಎಂದರು. ಎನ್.ಆರ್. ಪುರುಷೋತ್ತಮ ಮಾತನಾಡಿದರು. ಕ.ಸ.ಪ ಕಾರ್ಯದರ್ಶಿ ವಿಯಬಿ ದೇಶಪಾಂಡೆ, ಮಂಜುನಾಥ್ಹೆಗಡೆ, ಅಮುದಾ ಸೇರಿದಂತೆ ಶಿಕ್ಷಕರಾದ ಮಾಲತೇಶ್, ರಾಜಲಕ್ಷ್ಮೀ, ಸಹನ ಇದ್ದರು.