ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಹಿಳೆಯರು ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಸಿಸಿ ಕ್ಯಾಮರಾ: ಪ್ರತಿಭಟನೆ

Srinivasa Murthy VN
Updated On : 20 Nov 2013, 12:12 pm

ಮಾಲೂರು: ಕಾರ್ಖಾನೆಗೆ ಕೆಲಸಕ್ಕೆ ಬರುವ ಮಹಿಳೆಯರಿಗಾಗಿ ಇರುವ ವಸ್ತ್ರ ಬದಲಾಯಿಸುವ ಕೋಣೆಯಲ್ಲಿ ಅಕ್ರಮವಾಗಿ ಸಿಸಿ ಕ್ಯಾಮರ ಆಳವಡಿಸಿ ಮಹಿಳೆಯರ ಶೋಷಣೆ ಮಾಡುತ್ತಿದ್ದಾರೆ ಎಂದು ಅಪಾದಿಸಿ ಸ್ಥಳೀಯ ಕರವೇ ಕಾರ್ಯಕರ್ತರು ಇಲ್ಲಿನ ಕೈಗಾರಿಕಾ ಪ್ರಾಂಗಾಣದಲ್ಲಿರುವ ಮೆಡೋಫಾರ್ಮ್ ಕಾರ್ಖಾನೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಔಷಧಿಗೆ ಸಂಬಂಧಿಸಿದ ಕಾರ್ಖಾನೆಯಾದ ಮೆಢೋಫಾರ್ಮ್ ಕಂಪನಿಯಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿರುವ ಕೋಣೆಯಲ್ಲಿ ಸಿಸಿ ಕ್ಯಾಮೆರ ಆಳನವಡಿಸಿದ್ದಾರೆ ಎಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ತಿಳಿಸಿದ್ದು, ಕೊಡಲೇ ಕಾರ್ಖಾನೆ ವ್ಯವಸ್ಥಾಪಕ ಮಂಡಳಿ ಈ ಬಗ್ಗೆ ಉತ್ತರಿಸಬೇಕು ಹಾಗೂ ಪೊಲೀಸರು ವ್ಯವಸ್ಥಾಪಕರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ವಿಷಯ ತಿಳಿದ ತಾಲೂಕು ದಂಡಾಧಿಕಾರಿ ಡಾ. ಸುಧಾ ಪಾಯ್ಸ್ ಸ್ಥಳಕ್ಕೆ ಧಾವಿಸಿದರಲ್ಲದೇ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳಗೆ ಕಾರ್ಖಾನೆ ವ್ಯವಸ್ಥಾಪಕರು ಸಿಸಿ ಕ್ಯಾಮೆರ ತೆಗೆಸಿ ಸಿಮೆಂಟ್‌ನಿಂದ ಮುಚ್ಚಿರುವುದನ್ನು ಕಂಡ ತಹಸೀಲ್ದಾರ್ ಡಾ. ಸುಧಾ ಅವರು ಕಂಪನಿಯ ಅಧ್ಯಕ್ಷ ರಂಜಿತ್ ಚುರೇಸಿಯಾ ಅವರನ್ನು ತರಾಟೆ ತೆಗೆದುಕೊಂಡರು. ಕಂಪನಿಯಲ್ಲಿ ಕಳ್ಳತನ ಹೆಚ್ಚಾಗಿರುವುದರಿಂದ ಸಿಸಿ ಕ್ಯಾಮೆರ ಆಳವಡಿಸಲಾಗಿತ್ತು ಎಂದ ಚುರೇಸಿಯಾ ಮಹಿಳಾ ಕೋಣೆಯಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದಿಲ್ಲ. ಅಲ್ಲಿ ಕೇವಲ ಅವರು ಹಾಕಿಕೊಂಡು ಬಂದಿದ್ದ ಬಟ್ಟೆ ಮೇಲೆ ಕೋಟ್ ಹಾಕುತ್ತಾರೆ ಹಾಗೂ ತಾವೂ ತಂದಿದ್ದ ವ್ಯಾನಿಟಿ ಬ್ಯಾಗ್‌ನ್ನು ಅಲ್ಲಿಡುತ್ತಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಡಾ. ಸುಧಾ ಪಾಯ್ಸ್ ಈ ಬಗ್ಗೆ ಮಹಿಳಾ ಕಾರ್ಮಿಕರಿಂದ ದೂರು ಬಂದಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದರಲ್ಲದೇ ಕೋಣೆಯಲ್ಲಿ ಆಳವಡಿಸಲಾಗಿತ್ತು ಎನ್ನಲಾದ ಸಿಸಿ ಕ್ಯಾಮೆರವನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೋದರು. ಪ್ರತಿಭಟನೆಯಲ್ಲಿ ಬ. ಶ್ರೀನಿವಾಸ್,ಪುರಸಭೆ ಸದಸ್ಯ ಮುರಳೀಧರ್, ನವೀನ್, ರಾಜು ಸೇರಿದಂತೆ ಇದ್ದರು.

ಸಾರಿಗೆ ನಿಯಂತ್ರಣಾಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ
ಚಿಂತಾಮಣಿ: ನಿಯಂತ್ರಣಾಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲ ಎಂದು ಆರೋಪಿಸಿ ಪ್ರಯಾಣಿಕರು ನಿಲ್ದಾಣದಲ್ಲೇ ಅಧಿಕಾರಿಗಳಿಗೆ ಘರಾವ್ ಮಾಡಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಬೆಂಗಳೂರಿಗೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ನಿಯಂತ್ರಣಾಧಿಕಾರಿಗಳು ಪ್ರಯಾಣಿಕರಿಗೆ ಬಾಯಿ ಮಾತಿನಲ್ಲೇ ಆಶ್ವಾಸನೆ ಕೊಟ್ಟು 1 ಗಂಟೆ ತಡ ಮಾಡಿದ ಪರಿಣಾಮ ತಾಳ್ಮೆ ಕಳೆದುಕೊಂಡ ಪ್ರಯಾಣಿಕರು ನಿಯಂತ್ರಣಾಧಿಕಾರಿಗಳ ಕಾರ್ಯವೈಖರಿ ವಿರುದ್ಧ ತಿರುಗಿಬಿದ್ದು ಪರಸ್ಪರ ಮಾತಿನ ಚಕಮುಖಿ ನಡೆಸಿದರು.
ದಿನ ನಿತ್ಯ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲು ಇಲ್ಲಿನ ಹಲವು ಅಧಿಕಾರಿಗಳು ಪ್ರಯಾಣಿಕರಿಗೆ ಬಾಯಿ ಮಾತಿನಲ್ಲಿ ಆಶ್ವಾಸನೆ ನೀಡುತ್ತಿರುವುದರ ಮನಗೊಂಡ ಪ್ರಯಾಣಿಕರು ಇಂದು ಏಕಾಏಕಿ 1 ಗಂಟೆ ಆದರೂ ಬಸ್ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ತನದ ಬಗ್ಗೆ ಕಿಡಿಕಾರಿದರು.
ಬಸ್ ನಿಲ್ದಾಣದಿಂದ ಸಂಜೆ 7 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಘಟಕದ ವತಿಯಿಂದ ಸಿಗಂಧೂರು ಚೌಡೇಶ್ವರಿ ಅಮ್ಮನವರ ದೇವಾಲಯಕ್ಕೆ ನಿತ್ಯ ನೂರಾರು ಪ್ರಯಾಣಿಕರು ಹೋಗುತ್ತಿದ್ದರು. ಆದರೆ ಘಟಕದ ವ್ಯವಸ್ಥಾಪಕರು ಇತ್ತ ಗಮನ ಹರಿಸದೆ ಪ್ರಯಾಣಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರ ಕೆ.ಎಸ್.ಆರ್.ಟಿ.ಸಿ ವಿಭಾಗದ ಅಧಿಕಾರಿಗಳು ಇದೇ ತಾಲೂಕಿನ ಸ್ಥಳೀಯರು ಆಗಿರುವುದರಿಂದ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸಿ ಉತ್ತಮ ಕೆಲಸ ಮಾಡಲಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement