'ಕನಕ ಭವನ ಮಾರ್ಚ್ ವೇಳೆಗೆ ನಿರ್ಮಾಣ'
ಮುಳಬಾಗಲು: ಸರ್ಕಾರ ನೆರವು ನೀಡಲಿ, ಬಿಡಲಿ ಮಾರ್ಚ್ ಕೊನೆಯೊಳಗೆ ಪಟ್ಟಣದಲ್ಲಿ ಸುಸಜ್ಜಿತವಾದ ಕನಕ ಭವನ ನಿರ್ಮಾಣ ಮಾಡಲು ಬದ್ದವಾಗಿರುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು.
ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕನಕ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಬಗ್ಗೆ ಅಪಾರ ಕಳಿಕಳಿ ಇದ್ದ ಕನಕದಾಸರು ತಮ್ಮ ರಚನೆಗಳ ಮೂಲಕ ಸಮಾನತೆಯ ಹರಿಕಾರರಾಗಿದ್ದಾರೆ, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವೆಂದು ಹೇಳಿದರು.
ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಕನಕದಾಸರು ದಾಸ ಸಾಹಿತ್ಯದ ಪ್ರವರ್ತಕರಲ್ಲಿ ಮುಖ್ಯವಾದವರಾಗಿದ್ದಾರೆಂದರು. ಶಿಕ್ಷಕ ಸುಬ್ರಮಣಿ ಕನಕದಾಸರ ಜೀವನ ಹಾಗೂ ಸಾಧನೆಗಳ ಕುರಿತು ಮಾತನಾಡಿದರು.ರಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸುಬ್ರಮಣಿ, ವಕೀಲ ಕೀಲಾಗಾಣೆ ಶ್ರೀರಾಮ್, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಕುಮಾರ್, ಎನ್. ಜಗದೀಶ್ ಇದ್ದರು. 70ಕ್ಕೂ ಹೆಚ್ಚಿನ ಪಲ್ಲಕ್ಕಿಗಳು ಮೆರವಣೆಗೆ ನಡೆಸಲಾಯಿತು. ಕುರುಬ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಯಿತು.
ಕೆಜಿಎಫ್ನಲ್ಲಿ ಕನಕ ಜಯಂತಿ
ಕೆಜಿಎಫ್: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನಕ ಜಯಂತಿಯನ್ನು ವಿವಿಧ ಸಂಘ ಸಂಸ್ಥೆಗಳು ಹಾಗೂ ಕುರುಬ ಸಮುದಾಯ ಅರ್ಥಪೂರ್ಣವಾಗಿ ಆಚರಿಸಿದರು. ನಗರಸಭೆ ಕಾರ್ಯಾಲಯ, ನಾಡಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಾಲಕರ ಸರ್ಕಾರಿ ಪ್ರೌಢ ಶಾಲೆ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಇತರೆ ಸಂಘ ಸಂಸ್ಥೆಗಳಿಂದ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಕುರುಬ ಸಮಾಜದ ಜಿಲ್ಲಾ ನಿರ್ದೇಶಕ ಎಸ್.ಕೆ. ಆನಂದಮೂರ್ತಿ ನೇತೃತ್ವದಲ್ಲಿ ನಗರದ ಗಾಂಧಿವೃತ್ತದಲ್ಲಿ ಪಟಾಕಿ ಸಿಡಿಸಿ ನಂತರ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು. ನಾಗರಾಜ್, ಡಾ.ನಾಗಪ್ಪ, ಜಯರಾಮ್, ಶ್ರೀರಾಮಪ್ಪ, ರಮೇಶ್, ಶಂಕರಪ್ಪ, ನಾಗಪ್ಪ, ಕೃಷ್ಣಪ್ಪ ಇದ್ದರು.