ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬಯಲು ಶೌಚಾಲಯ ಬೇಡ'

Srinivasa Murthy VN
Updated On : 21 Nov 2013, 12:49 pm

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದ ಜನರಲ್ಲಿ ಶೌಚಾಲಯ ಬಳಕೆ ಕುರಿತು ಹೆಚ್ಚಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಶಾಸಕ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಗೆ ಸೇರಿದ ಆರು ಗ್ರಾಪಂಗಳಲ್ಲಿ ಹಮ್ಮಿಕೊಂಡಿರುವ ಪ್ರಗತಿ ಪರಿಶೀಲನಾ ಸಭೆಯ ಮೊದಲ ದಿನದ ಕಾರ್ಯಕ್ರಮ ಅಂಗವಾಗಿ ಮಿಣಕನಗುರ್ಕಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಂಗಳವಾರ ಅವರು ಮಾತನಾಡಿದರು.
ಗ್ರಾಮೀಣ ನಾಗರಿಕರಿಗೆ ಶೌಚಾಲಯ ಮುಖ್ಯ. ಇದರ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಸಿಗುತ್ತಿದೆ ಎನ್ನುವುದು ಅನೇಕರಿಗೆ ಅರಿವಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರಾಜ್ಯ ಸರ್ಕಾರ ನಿರ್ಮಲ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದ ಅವರು, ಪ್ರತಿ ಮನೆಯಲ್ಲೂ ಶೌಚಾಲಯವಿರಬೇಕು. ಪ್ರತಿಯೊಬ್ಬರೂ ಶೌಚಾಲಯ ಬಳಸುವಂತಾದಾಗ ಸಾಕಷ್ಟು ರೋಗಗಳು ಬಾರದಂತೆ ತಡೆಯಲು ಸಾಧ್ಯವಾಗುತ್ತದೆ.ಬಯಲು ಶೌಚಾಲಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರು.
ಈ ಸಂದರ್ಭದಲ್ಲಿ ಗೌರಿಬಿದನೂರು ತಹಸೀಲ್ದಾರ್ ಡಾ. ಭಾಸ್ಕರ್, ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ, ಜಿಪಂ ಸದಸ್ಯೆ ರಾಧಮ್ಮ ಗಂಗಾಧರಪ್ಪ, ತಾಪಂ ಸದಸ್ಯೆ ಪದ್ಮಾ ಪ್ರಕಾಶ್, ನಾರಾಯಣಸ್ವಾಮಿ, ಮೋಹನ್ ಕುಮಾರ್, ಪಿ.ಎನ್. ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಇದ್ದರು.

ಇಂದಿರಾಗಾಂಧಿ ಜಯಂತಿ ಆಚರಣೆ
ಬಂಗಾರಪೇಟೆ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿರವರ ಜನ್ಮದಿನಾಚರಣೆ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ವಿತರಿಸಿದರು. ನಂತರ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಇಂದಿರಾಗಾಂಧಿ ಅವರ ಆಡಳಿತದಲ್ಲಿ ದೇಶ ಅತ್ಯಂತ ಬಲಿಷ್ಠವಾಗಿತ್ತು. ಎಲ್ಲಾ ವರ್ಗದ ಜನರಿಗೆ ಸಾಮಾಜಿ ನ್ಯಾಯ ಕಲ್ಪಿಸಿ ಆದರ್ಶ ಮಹಿಳೆಯಾಗಿದ್ದರು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎ. ಪಾರ್ಥಸಾರಥಿ, ಪುರಸಭೆ ಸದಸ್ಯ ಶಫಿ, ವೆಂಕಟೇಶಗೌಡ, ಅಣ್ಣಾದೊರೆ, ರಂಗರಾಮಯ್ಯ, ಬಾಳೆ ಹಣ್ಣು ವೆಂಕಟೇಶ್, ಗೋವಿಂದ, ಪ್ರಸಾದ್, ಮುರಳಿ, ಬೇಕರಿ ಶ್ರೀನಿವಾಸ್, ಕೆಂಪಣ್ಣ, ಸ್ವಾಮಿಕಣ್ಣು ಇದ್ದರು.

ಅತ್ಯಾಚಾರ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಮಾಲೂರು: ಕಳೆದ ತಿಂಗಳು ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ತಲೆ ತಪ್ಪಿಸಿಕೊಂಡಿರುವ ಕೆಜೆಎಸ್ ಸಂಘಟನೆಯ ಜಿಲ್ಲಾಧ್ಯಕ್ಷ ಡಿ.ಟಿ. ಮಂಜುನಾಥ್‌ನನ್ನು ಕೊಡಲೇ ಬಂಧಿಸಬೇಕು ಎಂದು ಅಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚೆನ್ನಕೃಷ್ಣ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಸ್ಥಳೀಯ ಪೊಲೀಸ್‌ಠಾಣೆ ಮಂದೆ ಪ್ರತಿಭಟನೆ ನೆಡೆಸಿದ ಘಟನೆ ಮಂಗಳವಾರ ನಡೆದಿದೆ. ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಮೈಲಾಂಡಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಬಲತ್ಕಾರವಾಗಿ ತನ್ನ ಕಾರಿನಲ್ಲಿ ಕುಳ್ಳರಿಸಿಕೊಂಡು ಹೂಸೂರಿ ರಸ್ತೆಯಲ್ಲಿ ಅತ್ಯಾಚಾರ ವೆಸೆಗಿದ ಆರೋಪಿ ತಲೆ ಮರೆಸಿಕೊಂಡಿದ್ದರೂ ಆರೋಪಿಯನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ತೋರುತ್ತಿರುವ  ಕರ್ತವ್ಯ ಲೋಪದ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿ ಬಂದು ಉತ್ತರಿಸಬೇಕು ಎಂದರು. ಸ್ಥಳಕ್ಕೆ ಎಸ್‌ಪಿ ಬರಬೇಕೆಂದು ಪಟ್ಟು ಹಿಡಿದು ಪೊಲೀಸ್ ಠಾಣೆ ಮುಂಭಾಗ ಧರಣಿ ಮುಂದುವರೆಸಿದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಮೂಲಕ ಪ್ರತಿಭಟನೆಕಾರರ ಮನವೂಳಿಸಿದರು. ಎಸ್ಪಿ ಆದೇಶದ ಮೇರೆಗೆ ಪ್ರತಿಭಟನೆ ಜಾಗಕ್ಕೆ ಬಂದ ಕೋಲಾರ ಇನ್ಸ್‌ಪೆಕ್ಟರ್ ಶಿವುಕುಮಾರ್ ಸ್ಥಳೀಯ ಪೊಲೀಸ್ ತಂಡ ಬಿಟ್ಟು ಬೇರೆ ಮೂರು ತಂಡಗಳನ್ನು ರಚಿಸಿ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ ಮೇಲೆ ಪ್ರತಿಭಟನೆಕಾರರು ಧರಣಿ ಕೈ ಬಿಟ್ಟರು. ಪುರಸಭೆ ಸದಸ್ಯ ಪಚ್ಚಪ್ಪ, ಮಾಲಾದ್ರಿ, ದ್ಯಾಪಸಂದ್ರ ಹರಿ, ರವಿ, ವೆಂಕಟೇಶ್, ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement