ಆಟವಾಡುತ್ತಿದ್ದ ಮಗು ತೆರೆದ ತೊಟ್ಟಿಯಲ್ಲಿ ಬಿದ್ದು ಸಾವು
ಚಿಂತಾಮಣಿ: ಮನೆ ಕಟ್ಟಡ ನಿರ್ಮಾಣದ ಮಾಲೀಕನ ನಿರ್ಲಕ್ಷ್ಯದಿಂದ ತೆರೆದ ತೊಟ್ಟಿಯೊಂದರಲ್ಲಿ ಆಟವಾಡುತ್ತಿದ್ದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿನ್ನಸಂದ್ರ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಇಲಿಯಾಜ್ ಎಂಬುವರು ಮನೆ ಕಟ್ಟಡ ನಿರ್ಮಿಸುತ್ತಿರುವಾಗ ತೆರೆದಿರುವ ತೊಟ್ಟಿಯೊಂದರಲ್ಲಿ ಆಟವಾಡುತ್ತಿದ್ದ ಮಹೇಶ್ ಬಾಬು ಮಗನಾದ ರಾಮ್‌ಚರಣ್(2) ಬಾಲಕ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.