ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಸ್ತಿ ವಿವಾದಕ್ಕೆ ಯುವಕನ ಕೊಲೆ ಐವರು ಆರೋಪಿಗಳ ಬಂಧನ

Srinivasa Murthy VN
Updated On : 22 Nov 2013, 12:36 pm

ಕ.ಪ್ರ.ವಾರ್ತೆ ಚಿಂತಾಮಣಿ ನ. 21
ಜಮೀನು ವಿವಾದ ಹಿನ್ನೆಲೆಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದ ಘಟನೆಗೆ ಹೊಸ ತಿರುವು ಸಿಕ್ಕಿದೆ. ಸಂಬಂಧಿಗಳೆ ಆ ಯುವಕನನ್ನು ಕೊಲೆ ಮಾಡಿ ಬಾವಿಗೆ ಎಸೆದಿರುವ ಅಂಶ ವಿಚಾರಣೆಯಿಂದ ತಿಳಿದುಬಂದಿದ್ದು ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಭಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟರಾಯನಕೋಟೆಯಲ್ಲಿ ನಡೆದಿದೆ.
ಘಟನೆ ವಿವರ: ಕಳೆದ ಏಪ್ರಿಲ್ 12 ರಂದು ರಂದು ಜಗದೀಶ್ (19) ಯುವಕ ಅನುಮಾನಾಸ್ಪದವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವುದಾಗಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಶವವನ್ನು ಹೊರ ತೆಗೆದು ವಿಚಾರಣೆಗೊಳಪಡಿಸಿದಾಗ ಇದು ಮೇಲ್ನೋಟಕ್ಕೆ ಕೊಲೆ ಎಂದು ಮೃತನ ತಂದೆ ವೆಂಕಟೇಶ್ ಭಟ್ಲಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದರು.
ಪೊಲೀಸರು ದೂರನ್ನು ದಾಖಲಿಸಿಕೊಂಡು ಮೃತನ ಕುತ್ತಿಗೆ ಹಗ್ಗ ಬಿಗಿದು ಉಸಿರು ಕಟ್ಟಿ ಸಾಯಿಸಿರುವುದಾಗಿ ಕಳೆದ 6 ತಿಂಗಳಿನ ನಂತರ ವಿಧಿವಿಜ್ಞಾನ ಸಂಶೋಧನೆಯ ವರದಿ ಆಧಾರದ ಮೇರೆಗೆ ಪೊಲೀಸರು ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದರು. ಮೃತನ ಚಿಕ್ಕಪ್ಪ ರಾಮಸ್ವಾಮಿ, ಮುನಿಕೃಷ್ಣ, ವೆಂಕಟರೆಡ್ಡಿ, ಶ್ರೀನಿವಾಸ್ 4 ಜನ ಸೇರಿ ಸಾಯಿಸಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. 4 ಆರೋಪಿಗಳನ್ನು ಪೊಲೀಸರು ಚನ್ನರಾಯಗಡ್ಡೆ ಗ್ರಾಮದಲ್ಲಿ ಗುರುವಾರ ನ್ಯಾಯಾಂಗ ವಶಕ್ಕೆ ನೀಡಿರುವುದಾಗಿ ಭಟ್ಲಹಳ್ಳಿ ಠಾಣೆಯ ಸಬ್ ಇನ್ಸೆಪೆಕ್ಟರ್ ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.

ಅಂದರ್‌ಬಾಹರ್: ಐವರ ಸೆರೆ
ತಾಲೂಕಿನ ಆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಪುರ ಗ್ರಾಮದ ಕೆರೆ ಅಂಗಣದಲ್ಲಿ ಇಂದು ಸಂಜೆ ಅಂದರ್‌ಬಾಹರ್ ಜೂಜಿನಲ್ಲಿ ತೊಡಿಗಿದ ಗುಂಪಿನ ಮೇಲೆ ಸಬ್ ಇನ್ಸೆಪೆಕ್ಟರ್ ರಾಘವೇಂದ್ರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಜೂಜಿನಲ್ಲಿ ತೊಡಗಿದ ಆರೋಪಿಗಳಾದ ಕೇಶವ, ಗಿರೀಶ್, ನರಸಿಂಹಪ್ಪ, ಅರುಣ್, ಶಿವ ಅವರನ್ನು ಬಂಧಿಸಿ, ನಗದು ಹಣ 6300 ರು.ಗಳನ್ನು ವಶಪಡಿಸಿಕೊಂಡು ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿನಿ ಆತ್ಮಹತ್ಯೆ
ಶಿಡ್ಲಘಟ್ಟ: ಹೊಟ್ಟೆನೋವು ತಾಳಲಾರದೆ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ತಾಲೂಕಿನ ದಿಬ್ಬೂರಹಳ್ಳಿ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಪಟ್ಟಣದ ಬಿ.ಜೆ.ಎಸ್. ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿ ಅಮೃತ(17) ಮೃತ ದುರ್ದೈವಿ. ಈ ಸಂಬಂಧ ದಿಬ್ಬೂರ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement