ಪ್ರಾಥಮಿಕ ಶಾಲಾ ಶಿಕ್ಷಕ ಸಂಘಕ್ಕೆ ಪ್ರತಿನಿಧಿಗಳ ನೇಮಕ
ಟೇಕಲ್: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಮಾಲೂರು ಶಾಖೆಯ ಪ್ರತಿನಿಧಿಗಳ 2 ಸ್ಥಾನಗಳಿಗೆ ಖಾಲಿ ಇದ್ದ ಕಾರಣ ಅದಕ್ಕೆ ಆ ಸ್ಥಾನಗಳಿಗೆ ಟೇಕಲ್ನ ಮಾಕಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಶಿಧರ್, ಕುಂಬಾರಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎನ್. ಗೌರಮ್ಮನನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ತಿಳಿಸಿದ್ದಾರೆ. ತಾಲೂಕು ಕಾರ್ಯಕಾರಿ ಸಮಿತಿಯ ತಾಲೂಕು ಅಧ್ಯಕ್ಷ ಎಂ. ಮುನಿನಾರಾಯಣ, ಉಪಾಧ್ಯಕ್ಷ ಎ.ಕೆ. ವೆಂಕಟೇಶ್ ಹಾಗೂ ತಾಲೂಕು ಸಂಘದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದು ನೂತನ ಪ್ರತಿನಿಧಿಗಳನ್ನು ಸ್ವಾಗತಿಸಿದರು.