ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಲತಾಯಿ ಧೋರಣೆ ತೋರುತ್ತಿರುವ ಸರ್ಕಾರ

Srinivasa Murthy VN
Updated On : 22 Nov 2013, 12:37 pm

ಮಾಲೂರು: ಬರಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ಸೇತರ ಶಾಸಕರ ಕ್ಷೇತ್ರಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಕೆ.ಎಸ್. ಮಂಜುನಾಥ್ ಆರೋಪಿಸಿದ್ದಾರೆ. ಪತ್ರಕರ್ತರೊಡನೆ ಮಾತನಾಡಿ, ಜಿಲ್ಲೆಯ 5 ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರಿರುವ ಮುಳಬಾಗಿಲು,ಬಂಗಾರಪೇಟೆ, ಶ್ರೀನಿವಾಸ ಪುರ ಹಾಗೂ ಕೋಲಾರ ಕ್ಷೇತ್ರಗಳಿಗೆ ಮಾತ್ರ ಬರಪರಿಹಾರ ವಿತರಣೆಗೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಬಿಜೆಪಿ ಶಾಸಕರಿರುವ ಕೆ.ಜಿ.ಎಫ್ ಹಾಗೂ ಜೆಡಿಎಸ್ ಶಾಸಕರಿರುವ ಮಾಲೂರು ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದರು. ನೀರಿಗಾಗಿ 20 ಕೊಳವೆ ಬಾವಿಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದರೂ ಜಿಲ್ಲಾಧಿಕಾರಿಗಳು 8 ಕೊಳವೆ ಬಾವಿಗೆ ಅನುಮತಿ ನೀಡಿದ್ದಾರೆ. ಇದರಿಂದ ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಈ ಬಾರಿ ಬೇಸಿಗೆ ಕಳೆಯುವುದು ಕಷ್ಟವಾಗಲಿದೆ ಎಂದರು. ರಾಜ್ಯ ಸರ್ಕಾರ ಹೀಗೆ ತಮ್ಮ ತಾರತಮ್ಯ ನೀತಿ ಮುಂದುವರೆಸಿದರೆ ಜನ ಗುಳೆ ಹೋಗುವ ಸಂಭವವಿದ್ದು, ಈ ಬಗ್ಗೆ ಮುಂದಿನ ವಾರ ಪ್ರಾರಂಭವಾಗುವ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದರು. ಅಲ್ಲೂ ನ್ಯಾಯ ಸಿಗದಿದ್ದರೆ ತಾಲೂಕು ಜನತೆಯ ಸಹಕಾರದಲ್ಲಿ ರಸ್ತೆ, ಸಾರಿಗೆ, ರೈಲುಗಳನ್ನು ಬಂದ್ ಮಾಡುವ ಮೂಲಕ ಅಹೋರಾತ್ರಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement