ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಾಮಾಚಾರ, ನರಬಲಿ ಅತಿ ಪಾಪದ ಕೃತ್ಯ; ಕೇಮಾರು ಶ್ರೀ

Srinivasa Murthy VN
Updated On : 22 Nov 2013, 1:28 am

ಸುಬ್ರಹ್ಮಣ್ಯ: ಸಮಾಜದ ದುರ್ಬಲ ಜನರಿಗೆ ಅನ್ಯಾಯವಾದಾಗ ಆ ಕುಟುಂಬದ ಕಣ್ಣೀರು ಒರೆಸುವ ಹಾಗೂ ನ್ಯಾಯ ಸಿಗುವವರೆಗಿನ ಹೋರಾಟಕ್ಕೆ ನಮ್ಮ ಬೆಂಬಲವಿದೆ. ನ್ಯಾಯ, ಸತ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ವಾಮಾಚಾರ, ನರ ಬಲಿ ಅತಿ ಪಾಪದ ಕೃತ್ಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಸಾರಿಕಾ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿ, ಸಾರಿಕಾ ವಾಮಾಚಾರಕ್ಕೆ ಬಲಿಯಾದ ಬಗ್ಗೆ ಹೆತ್ತವರಿಗೆ ಶಂಕೆ ಇದ್ದು ಉನ್ನತ ಮಟ್ಟದ ಕೂಲಂಕಷ ತನಿಖೆ ಆಗಬೇಕು. ಅಮೂಲ್ಯವಾದ ಬದುಕನ್ನು ಕಸಿಯುವ ನರಬಲಿ ತಪ್ಪು, ಯಾವುದೇ ಶಾಸ್ತ್ರದಲ್ಲಿ ಪ್ರಯೋಗವಿಲ್ಲ. ನಿಧಿಗಾಗಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು ಸರ್ಕಾರ ನಿಧಿ ಮತ್ತು ಹರಳು ಕಲ್ಲು ದಂಧೆಗೆ ಕಡಿವಾಣ ಹಾಕಬೇಕಾಗಿದೆ ಎಂದರು.

ರಥದ ಕಳಸ ಬಿದ್ದು ಇಬ್ಬರಿಗೆ ಗಾಯ
ಕುಶಾಲನಗರ: ಕುಶಾಲನಗರ ಇತಿಹಾಸ ಪ್ರಸಿದ್ಧ ಶ್ರೀ ಗಣಪತಿ ದೇವಸ್ಥಾನದಲ್ಲಿ ಗುರುವಾರ ನಡೆದ ರಥೋತ್ಸವ ಸಂದರ್ಭದಲ್ಲಿ ರಥದ ಕಳಸ ಕಳಚಿ ಬಿದ್ದು ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ.  ಅಯ್ಯಪ್ಪ ವ್ರತಧಾರಿಗಳಾದ ಮೋಹನ್ ಮತ್ತು ಲೋಕೇಶ್ ಗಾಯಗೊಂಡವರು. ನೂತನ ರಥದಲ್ಲಿ ಅಳವಡಿಸಿದ್ದ ಕಳಸ ಮೇಲ್ಭಾಗದಲ್ಲಿ ಹಾದು ಹೋಗಿದ್ದ ವಿದ್ಯುತ್ ಸಂಪರ್ಕ ತಂತಿಗೆ ತಗಲಿ ಅಕಸ್ಮಾತ್ ಕೆಳಗೆ ಬಿದ್ದ ಸಂದರ್ಭದಲ್ಲಿ ಇಬ್ಬರು ಅಯ್ಯಪ್ಪವ್ರತಧಾರಿಗಳ ತಲೆಗೆ ತಾಗಿತು. ನಂತರ ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement