ಶಶಾಂಕ್ ರಾಜ್ಯ ಮಟ್ಟದ ಒಲಂಪಿಯಾಡ್ಗೆ ಆಯ್ಕೆ
ಶಿಡ್ಲಘಟ್ಟ: ತಾಲೂಕಿನ ಮುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೆ. ಶಶಾಂಕ್ ಜಿಲ್ಲಾ ಮಟ್ಟದ ಒಲಂಪಿಯಾಡ್ ಪರೀಕ್ಷೆಯಲ್ಲಿ ಪಾಸಾಗಿ ರಾಜ್ಯ ಹಂತದ ಒಲಂಪಿಯಾಡ್ ಪರೀಕ್ಷೆಗೆ ಆಯ್ಕೆಯಾಗಿದ್ದಾನೆ.
ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಗೆ ಕೊರತೆಯಿಲ್ಲ ಎಂದು ತೋರಿಸಿರುವ ಶಶಾಂಕ್ ಮುತ್ತೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು ಎಸ್.ಎಸ್.ಎ ಯುನಿಸೆಫ್, ಕೆ.ಎಸ್.ಕ್ಯು, ಎ.ಎ.ಸಿ ಸಹಯೋಗದೊಂದಿಗೆ ಗಣಿತ ಪರೀಕ್ಷೆಯಲ್ಲಿ ನಡೆಸುವ ಜಿಲ್ಲಾ ಹಾಗೂ ತಾಲೂಕು ಹಂತದ ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ರಾಜ್ಯ ಮಟ್ಟದ ಒಲಂಪಿಯಾಡ್ ಪರೀಕ್ಷೆಗೆ ಆಯ್ಕೆಯಾದ ಏಕೈಕ ವಿದ್ಯಾರ್ಥಿಯಾಗಿದ್ದಾನೆ.
ಮುತ್ತೂರಿನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಹಲ್ಯ, ಸಹ ಶಿಕ್ಷಕರು ವಿದ್ಯಾರ್ಥಿ ಪ್ರತಿಭೆಗೆ ಸಂತಸ ವ್ಯಕ್ತಪಡಿಸಿದ್ದಾರೆ.