ಸಚ್ಚಿದಾನಂದ ಶ್ರೀಗಳಿಗೆ ಸ್ವಾಗತ
ಗೌರಿಬಿದನೂರು: ಗುರುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಜಗದ್ಗುರು ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಗೆ ಸ್ಥಳೀಯ ಬ್ರಾಹ್ಮಣ ಕ್ಷೇಮಾಭ್ಯುದಯ ಸಂಘದವರಿಂದ ಪೂರ್ಣಕುಂಭ ಸ್ವಾಗತ ಮಾಡಲಾಯಿತು.
ಶುಕ್ರವಾರ ರೇಮಂಡ್ ಕಾರ್ಖಾನೆ ಸಮೀಪ ನೂತನವಾಗಿ ನಿರ್ಮಾಣ ಮಾಡುತ್ತಿರುವ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಹೋಮ, ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲು ಆಗಮಿಸಿದ ಸ್ವಾಮೀಜಿ ಯವರನ್ನು ಬ್ರಾಹಣ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ ರಾವ್, ಖಚಾಂಚಿ ಉಪೇಂದ್ರ ರಾವ್, ಕಾರ್ಯದರ್ಶಿ ನಾಗಭೂಷಣರಾವ್, ರವಿಕುಮಾರ್ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಿದರು.