ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸದಾಶಿವ ಆಯೋಗ ಜಾರಿಗೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿಯೆತ್ತಲು ಮನವಿ

Srinivasa Murthy VN
Updated On : 22 Nov 2013, 12:39 pm

ಮುಳಬಾಗಲು: ಮಾದಿಗ ಜನಾಂಗದ ಮೀಸಲಾತಿಗೆ ಆದ್ಯತೆ ನೀಡಿರುವ ಸದಾಶಿವ ಆಯೋಗದ ವರದಿ ಜಾರಿಗೆ ತರಲು 25ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಧ್ವನಿಯೆತ್ತಲು ಆಗ್ರಹಿಸಿ ತಾಲೂಕು ಮಾದಿಗ ದಂಡೋರ ಮುಖಂಡರು ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಬಾರಿ ನಡೆದ ಬೆಳಗಾವಿ ಅಧಿವೇಶನದಲ್ಲಿ ವರದಿ ಜಾರಿಗೆ ಆಗ್ರಹಿಸಿದ ಪ್ರತಿಭಟನಾಕಾರರಿಗೆ ಲಾಠಿ ರುಚಿ ತೋರಿಸಲಾಗಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಘಟನೆಯನ್ನು ವಿರೋಧಿಸಿದ್ದರು. ಆದ್ದರಿಂದ ಈ ಕುರಿತು ಶಾಸಕರು ಅಧಿವೇಶನದಲ್ಲಿ ಧ್ವನಿಗೊಡಿಸಬೇಕು ಎಂದು ಕೋರಿದ್ದಾರೆ. ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ನಾಗರಾಜ್, ವಕೀಲ ವಿ. ರಾಜಪ್ಪ, ಪಿ. ನಟರಾಜ್, ಆರ್.ಪ್ರಕಾಶ್, ನರೇಶ್, ಗುರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement