ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಮಾಜ ತಿದ್ದುವ ಕಾರ್ಯ ಮಾಡಿದ ದಾಸಶ್ರೇಷ್ಠ'

Srinivasa Murthy VN
Updated On : 22 Nov 2013, 12:40 pm

ಮಾಲೂರು: ಕೀರ್ತನೆ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ ದಾಸಶ್ರೇಷ್ಠ ಕನಕ ದಾಸರ ಮಾರ್ಗದರ್ಶನವನ್ನು ಪ್ರತಿಯೂಬ್ಬರು ಪಾಲಿಸಬೇಕು ಎಂದು ಶಾಸಕ ತೆ.ಎಸ್. ಮಂಜನಾಥ್ ಹೇಳಿದರು.
ಪಟ್ಟಣದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ತಾಲೂಕು ಹಬ್ಬಗಳ ಸಮಿತಿ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 14 ನೇ ಶತಮಾನದಲ್ಲಿ ಸಮಾಜವನ್ನು ಕಾಡುತ್ತಿದ್ದ ಮೂಢ ನಂಬಿಕೆ, ಜಾತಿ ಸಂಘರ್ಷದ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಮಲಗಿದ್ದವರನ್ನು ಬಡಿದ್ದೆಬಿಸಿದ ಕೀರ್ತಿ ಕನಕ ದಾಸರಿಗೆ ಸಲ್ಲುತ್ತದೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ವಿ. ಹನುಮಂತಯ್ಯ, ತಾಪಂ ಸದಸ್ಯ ಪುಟ್ಟಸ್ವಾಮಿ, ರಘುನಾಥ್, ವೀರಭದ್ರಪ್ಪ ಮಾತನಾಡಿದರು. ಪ್ರಾಂಶುಪಾಲ ಚಂದ್ರಶೇಖರ್ ನಂಗಲಿ, ಪ್ರಾಧ್ಯಪಾಕ ಅನಂತಮೂರ್ತಿ, ರಾಮಕೃಷ್ಣ ಕನಕ ದಾಸರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯ ಮುಂಭಾಗ ತಮಿಳುನಾಡಿನ ನಂಜುಂಡಪ್ಪ ತಂಡದಿಂದ ಕುರುಬ ಸಂಸ್ಕೃತಿಯ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಪ್ರದರ್ಶನ ನಡೆಯಿತು. ಜಿಪಂ ಸದಸ್ಯ ರಾಮಸ್ವಾಮಿ ರೆಡ್ಡಿ, ಯಲ್ಲಮ್ಮ, ಯಶೋಧಮ್ಮ, ತಾಪಂ ಉಪಾಧ್ಯಕ್ಷೆ ರಾಜಮ್ಮ, ಪುರಸಭೆ ಸದಸ್ಯ ಮುರಳೀಧರ್, ಚೆನ್ನಕೇಶವ, ಅಂಜನಿ ಸೋಮಣ್ಣ, ಇಒ ಸಂಜೀವಪ್ಪ, ಮುಖ್ಯಾಧಿಕಾರಿ ರೇಣುಕಾ,ಅಪ್ಪಿ, ಗುಂಡಪ್ಪ ಇದ್ದರು. ವೇದಿಕೆಯ ಕಾರ್ಯಕ್ರಮದ ನಂತರ ಕನಕ ಪಲ್ಲಕ್ಕಿಗೆ ಶಾಸಕ ಮಂಜುನಾಥ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಕುಣಿತ ಸೇರಿದಂತೆ ಜನಪದ ಕಲಾ ತಂಡಗಳು ಭಾಗವಹಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement