ಸುವರ್ಣ ಕೃಷಿ ಪರಿಸರ ಚೈತನ್ಯ ಪ್ರಶಸ್ತಿ ಪ್ರದಾನ
ಮುಳಬಾಗಲು: ಮನುಷ್ಯನ ದುರಾಸೆಯ ಫಲವಾಗಿ ಗಿಡಮರಗಳು ನಾಶವಾಗುತ್ತಿವೆ. ಇದು ಹೀಗೆ ಮುಂದುವರಿದರೇ ಭವಿಷ್ಯದಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಕೋಲಾರ ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ಹೇಳಿದರು. ತಾಲೂಕು ಬೈರಕೂರು ಗ್ರಾಮದಲ್ಲಿ ಇತ್ತೀಚೆಗೆ ನೆಹರು ಕೆನಡಿ ಪ್ರೌಢಶಾಲೆಯ ಆವರಣದಲ್ಲಿ ಕೃಷಿ ಪರಿಸರ ಸಂರಕ್ಷಣ ಟ್ರಸ್ಟ್ನಿಂದ ಏರ್ಪಡಿಸಿದ್ದ ಪ್ರಗತಿ ಪರ ರೈತರಿಗೆ ಸುವರ್ಣ ಕೃಷಿ ಪರಿಸರ ಚೈತನ್ಯ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ದೇಶದಲ್ಲಿ ಪರಿಸರ ರಕ್ಷಣೆಗೆ ಅಗತ್ಯವಾದ ಆದ್ಯತೆ ಸಿಗುತ್ತಿಲ್ಲ ಎಂದರು. ಸಹಾಯಕ ಉಪ ಅರಣ್ಯಾಧಿಕಾರಿ ಎಸ್. ರೇವಯ್ಯ, ಅಂತರ್ಜಲ ಮರುಪೂರ್ಣಗೊಳಿಸುವ ಕೆಲಸ ಆಗಬೇಕಿದೆ, ಮರಳು ದಂಧೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದೆ ಎಂದರು. ಕೋಲಾರ ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ, ನರಸಪುರ ಗ್ರಾಪಂ ಉಪಾಧ್ಯಕ್ಷ ಎಚ್.ಎನ್. ಹರೀಶಗೌಡ, ಅಬ್ಬಣೆ ಶಿವಪ್ಪ, ಮಂಜುನಾಥ್ ,ದೇವರಾಜ್, ಕೆ.ವಿ. ರೆಡ್ಡಿ, ಆರ್. ಸುಬ್ರಮಣಿ ಇದ್ದರು.