ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಟೋ ಚಾಲಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

Srinivasa Murthy VN
Updated On : 23 Nov 2013, 1:27 am

ಗೌರಿಬಿದನೂರು: ಶ್ರೀ ಭುವನೇಶ್ವರಿ ಆಟೋ ಚಾಲಕರ ಸಂಘದ ವತಿಯಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ ನಡೆಯಿತು. ಮಂಚೇನಹಳ್ಳಿ ಪಿ.ಎಸ್.ಐ. ಸುಂದರ್ ಧ್ವಜಾರೋಹಣ ನೆರವೇರಿಸಿದರು.
ಸಾದೇನಹಳ್ಳಿ ಶ್ರೀಧರ್ (ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷರು) ಉಪಸ್ಥಿತರಿದ್ದು ಎಲ್ಲಾ ಅಟೋ ಚಾಲಕರ ಮತ್ತು ಮಾಲಿಕರಿಗೆ ವರ್ಷಪೂರ್ತಿ ಯಾವುದೇ ಅಪಘಾತಗಳಿಲ್ಲದೆ ಸಾರ್ವಜನಿಕರ ಸೇವೆಗೆ ಮತ್ತು ನಾಡ ಹಬ್ಬ 58ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಕನ್ನಡದ ಭುವನೇಶ್ವರಿ ಆಶೀರ್ವದಿಸಲೆಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯಸ್ಥರಾದ ಚೀಲೆನಹಳ್ಳಿ ಗಂಗಾಧರ್ ಜಹೀರ್ಖಾನ್, ಎಚ್.ಟಿ. ಗಂಗಾಧರ್ ಚಾಲಕರು ಮತ್ತು ಗೃಹರಕ್ಷಕದಳ ಮತ್ತು ಚಾಲಕರು ಮತ್ತು ಮಾಲಿಕರು ಆಟೋಗಳಿಗೆ ಶೃಂಗರಿಸಿ ಎಲ್ಲಾ ಆಟೋಗಳ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement