ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಇಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ ಯತ್ನ: ಒಬ್ಬಳ ಸಾವು

Srinivasa Murthy VN
Updated On : 23 Nov 2013, 1:25 am

ಗೌರಿಬಿದನೂರು: ಪೋಷಕರ ಬೈಗುಳದಿಂದ ಬೇಸತ್ತ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಒಬ್ಬಳು ಸಾವನ್ನಪ್ಪಿ ಮತ್ತೊಬ್ಬಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾರುಣ ಘಟನೆ ತಾಲೂಕು ಹೊಸೂರು ಹೋಬಳಿ ಎರ್ರಪೋತೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಮೃತಳನ್ನು ಜಯಂತಿ(15) ಎನ್ನಲಾಗಿದ್ದು ಇವಳ ಸೋದರ ಸಂಬಂಧಿ ಆಶಾ(15) ಬೆಂಗಳೂರು ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಕುಮಾರ್ ಆತ್ಮಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಘಟನೆ ಹಿನ್ನೆಲೆ: ಗೌರಿಬಿದನೂರು ತಾಲೂಕು ಹೊಸೂರು ಹೋಬಳಿ ಎರ್ರಪೋತೇನಹಳ್ಳಿ ಶಿವಲಿಂಗಪ್ಪನ ಮಗಳು ಜಯಂತಿ ಮತ್ತು ಶಿವಲಿಂಗಪ್ಪನ ಸೋದರ ರಾಮಕೃಷ್ಣಪ್ಪನ ಮಗಳು ಆಶಾ ಇಬ್ಬರೂ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ ಸ್ಮಾರಕ ಪ್ರೌಢಶಾಲೆಯಲ್ಲಿ ಹಾಸ್ಟೆಲ್‌ನಲ್ಲಿದ್ದು 10ನೇ ತರಗತಿಯಲ್ಲಿ ಓದುತ್ತಿದ್ದರು. ಕಾರಣಾಂತರದಿಂದ ಕಳೆದ 3ತಿಂಗಳ ಹಿಂದೆ ಹಾಸ್ಟೆಲ್ ಬಿಟ್ಟು ಮನೆಗೆ ವಾಪಸಾಗಿ ನಾವು ಶಾಲೆಗೆ ಹೋಗುವುದಿಲ್ಲ. ನಮಗೆ ಶಾಲೆಗೆ ಹೋಗಲು ಇಷ್ಟವಿಲ್ಲ ಶಾಲೆ ದೂರವಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಪೋಷಕರು ಪದವಿವರೆಗೆ ಓದಿ ಎಂದು ಒತ್ತಾಯಿಸಿ ಕನಿಷ್ಠ ಹತ್ತನೇ ತರಗತಿಯನ್ನಾದರೂ ಮುಗಿಸಿ ಪರೀಕ್ಷೆಗೆ ಇನ್ನು ಕೇವಲ 3 ತಿಂಗಳಿದೆ ಎಂದು ಒತ್ತಾಯಿಸಿದಾಗ  ಬಲವಂತದಿಂದ ಶಾಲೆಗೆ ಹೋಗುತ್ತಿದ್ದ ಇವರು ನಿನ್ನೆ ನಾಲ್ಕು ಗಂಟೆಗೆ ಮನೆಗೆ ಬಂದಿದ್ದಾರೆ. ಇಷ್ಟು ಬೇಗ ಶಾಲೆಯಿಂದ ಏಕೆ ಬಂದಿರಿ ಎಂದು ಪೋಷಕರು ಕೇಳಿದಾಗ ಶಾಲೆಯಿಂದ ಪ್ರವಾಸ ಕಾರ್ಯಕ್ರಮವಿರುವುದರಿಂದ ನಾವು ಬೇಗ ಬಂದಿದ್ದೇವೆ ಎಂದು ಹೇಳಿ ತಮ್ಮ ಮನೆಯ ಪಕ್ಕದ ಸಂಬಂಧಿಗಳ ಮನೆಯ ಮಹಡಿ ಮೇಲೆ ಓದುತ್ತೇವೆಂದು ಹೇಳಿ ಹೋದವರು ಸಂಜೆ 7ಗಂಟೆ ಸಮಯದಲ್ಲಿ ಇಬ್ಬರೂ ಚೀರಾಡಿಕೊಂಡು ಕೆಳಗೆ ಬಂದು ಇವರ ಅಣ್ಣ ಹರೀಶನಿಗೆ ವಿಷ ಸೇವಿಸಿರುವುದಾಗಿ ತಿಳಿಸಿ ಕನಕಾಂಬರ ಹೂವಿಗೆ ಸಿಂಪಡಿಸಲು ತಂದಿದ್ದ ಕ್ರಿಮಿನಾಶಕ ಸೇವಿಸಿ ಅಳುತ್ತಿರುವಾಗ ತಕ್ಷಣವೇ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಜಯಂತಿ ಸಾವನ್ನಪ್ಪಿದ್ದು ಆಶಾ ಬದುಕುಳಿದಿದ್ದು ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
 ಸ್ಥಳಕ್ಕೆ ಸಿಪಿಐ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದು ಆಸ್ಪತ್ರೆಯಲ್ಲಿರುವ ಆಶಾ ಚೇತರಿಸಿಕೊಂಡ ನಂತರ ಪ್ರಕರಣವನ್ನು ಪೂರ್ಣ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement