ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಡಾನೆಗಳ ದಾಳಿ: ರಾಗಿ, ಬತ್ತ ನಾಶ

Srinivasa Murthy VN
Updated On : 23 Nov 2013, 1:25 am

ಬಂಗಾರಪೇಟೆ: ಕಳೆದ ಮೂರು ದಿನಗಳಿಂದ ಕಾಡಾನೆಗಳ ಹಿಂಡು ಗಡಿ ಭಾಗದ ಅರಣ್ಯದಲ್ಲಿ ಬೀಡು ಬಿಟ್ಟಿದ್ದು ರೈತರು ಬೆಳೆದಿರುವ ರಾಗಿ ಭತ್ತ ಮತ್ತಿತರೆ ಬೆಳೆಯನ್ನು ನಾಶಪಡಿಸಿ ರೈತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಕಳೆದ ಮಂಗಳವಾರ ರಾತ್ರಿ ತಮಟಮಾಕನಹಳ್ಳಿ ಕಾಡಿನಲ್ಲಿ ಸುಮಾರು 28 ಕಾಡಾನೆಗಳು ಕಾಣಿಸಿಕೊಂಡಿತ್ತು, ಎರಡು ದಿನಗಳಿಂದ ಯರಗೋಳ್ ಪ್ರದೇಶದ ಯಲ್ಲೋಜಿ ಕೆರೆ ಬಳಿ ಬೀಡು ಬಿಟ್ಟಿವೆ ಮತ್ತು ಈ ಪ್ರದೇಶದಲ್ಲಿ ರೈತರು ಬರದಲ್ಲಿಯೂ ಕಷ್ಟಪಟ್ಟು ಬೆಳೆದಿರುವ ರಾಗಿ, ಭತ್ತ, ಟೋಮೆಟೋ ಮತ್ತಿತರೆ ಬೆಳೆಗಳನ್ನು ತುಳಿದು ನಾಶಪಡಿಸಿದೆ.
 ಮೂರು ನಾಲ್ಕು ದಿನಗಳಿಂದ ಅರಣ್ಯ ಉಪಸಂರಕ್ಷಣಾಧಿಕಾರಿ ಮುನೇಗೌಡ, ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಣ, ರೇಂಜರ್ ಚಂದ್ರಶೇಖರ ರೆಡ್ಡಿ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮೂಲಕ ಆನೆಗಳ ಹಿಂಡನ್ನು ಮತ್ತೆ ತಮಿಳುನಾಡಿನ ಗಡಿ ದಾಟಿಸಲು ಹಿನ್ನಿಲ್ಲದ ಪ್ರಯತ್ನದಲ್ಲಿದ್ದಾರೆಯಾದರೂ ಇನ್ನೂ ಸಾಧ್ಯವಾಗಿಲ್ಲ. ಹಗಲು ಎಲ್ಲಿಯೂ ಕಾಣಿಸದೆ ಕತ್ತಲಾಗುತ್ತಿದ್ದಂತೆ ಹೊಲಗಳತ್ತ ಧಾವಿಸಿ ಬೆಳೆ ನಾಶ ಮಾಡುತ್ತಿದೆ. ಇದರಿಂದ ಅಧಿಕಾರಿಗಳು ನೆಮ್ಮದಿಯಾಗಿರಲು ಆಗದೆ ರೈತರನ್ನು ಕಾಡಂಚಿಗೆ ಒಂಟಿಯಾಗಿ ಹೋಗದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಕಳೆದ ವರ್ಷ ಬಂದು ಈ ಆನೆಗಳು ಮಾಡಿದ ರಾದ್ಧಾಂತವನ್ನು ಇನ್ನು ಮಾಸಿಯಾಗುವ ಮುನ್ನವೆ ಮತ್ತೆ ಆಕ್ರಮಿಸಿಕೊಂಡಿದೆ. ಕತ್ತಲಾಗುತ್ತಿದಂತೆ ಗ್ರಾಮಸ್ಥರು ಮನೆಯಿಂದ ಹೊರ ಬರಲು ಎದುರುವಂತಾಗಿದೆ. ಪದೇ ಪದೆ ಕಾಡಾನೆಗಳು ರಾಜ್ಯ ಅರಣ್ಯಕ್ಕೆ ಲಗ್ಗೆ ಹಾಕುತ್ತಿರುವುದರಿಂದ ಮತ್ತು ಇಲ್ಲಿ ಕರಡಿ  ಮತ್ತಿತರೆ ಪ್ರಾಣಿಗಳು ಜನರನ್ನು ಹೆಚ್ಚಾಗಿ ಭಾದಿಸುತ್ತಿರುವುದರಿಂದ ಈ ಪ್ರದೇಶವನ್ನು ಅಭಯಾರಣ್ಯ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಕಳೆದ ವರ್ಷ ಈ ಭಾಗದ ರೈತರು ಸರ್ಕಾರವನ್ನು ಆಗ್ರಹಿಸಿದ್ದರೂ ಸರ್ಕಾರ ಮೌನಕ್ಕೆ ಶರಣಾಗಿರುವುದರಿಂದ ಮತ್ತೆ ರೈತರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಇದೇ ತಿಂಗಳು 25ರಂದು ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾಡಾನೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ ರೈತರಿಗೆ ಶಾಶ್ವತವಾಗಿ ಮುಕ್ತಿ ಕಾಣಿಸುವಂತೆ ಕ್ರಮಕ್ಕೆ ಮುಂದಾಗಬೇಕೆಂದು ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement