ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಕೊಲೆ
ಮಾಲೂರು: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಗುದ್ದಲಿಯಿಂದ ಹೊಡೆದು ಸಾಯಿಸಿರುವ ಘಟನೆ ತಾಲೂಕಿನ ಶುಕ್ರವಾರ ಬೆಳಗ್ಗಿನ ಜಾವ ತಾಲೂಕಿನ ತೊರ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸತ್ತವನನ್ನು ಅದೇ ಗ್ರಾಮದ ಚಂದ್ರಪ್ಪ(48) ಎಂದು ಗುರುತಿಸಲಾಗಿದೆ. ಕ್ಯಾರೆಟ್ ಅಗೆಯುವ ಕೆಲಸ ಮಾಡುವ ಚಂದ್ರಪ್ಪ ಎಂದಿನಂತೆ ಶುಕ್ರವಾರ ಬೆಳಗಿನ ಜಾವ 5 ಗಂಟೆ ಸಮಯಕ್ಕೆ ಮನೆಯಿಂದ ಹೊರಟ ಚಂದ್ರಪ್ಪನ ಶವವು ಗ್ರಾಮದ ಹೊರವಲಯದಲ್ಲಿ ಕಾಣಿಸಿದೆ. ದಿನ ನಿತ್ಯದ ಜತೆಗಾರರು ಕೊಲೆಯಾದ ಸಂಧರ್ಭದಲ್ಲಿ ಜತೆಯಲ್ಲಿ ಇರಲಿಲ್ಲ ಎಂಬ ಹೇಳಿಕೆ ನೀಡುತ್ತಿದ್ದು, ಘಟನೆ ಸ್ಥಳಕ್ಕೆ ಭೇಟಿ ನೀಡಿರುವ ಇನ್ಸ್ಪೆಕ್ಟರ್ ಶಿವುಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಡಿತದ ಚಟವಿದ್ದ ಚಂದ್ರಪ್ಪನ ಕೊಲೆಯ ಹಿನ್ನೆಲೆ ತನಿಖೆ ಮೂಲಕ ಹೊರಬರಬೇಕಾಗಿದೆ.