ಪತಿ ಕಿರುಕುಳ: ಪತ್ನಿ ನೇಣಿಗೆ ಶರಣು
ಬಂಗಾರಪೇಟೆ: ಗಂಡನ ಕಿರುಕುಳ ತಾಳಲಾರದೆ ಪತ್ನಿಯೊಬ್ಬಳು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಿರ್ಮಲ 30 ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು 15 ವರ್ಷಗಳ ಹಿಂದೆ ಆಂದ್ರಪ್ರದೇಶದ ಆನಂತಪುರ ಜಿಲ್ಲೆ ಗುಡಿಪಲ್ಲಿ ಗ್ರಾಮದ ವೆಂಕಟರೆಡ್ಡಿ ಎಂಬುವರ ಮಗಳಾದ ನಿರ್ಮಲರನ್ನು ಚಂಬೇನಹಳ್ಳಿ ಗ್ರಾಮದ ನಾರಾಯಣರೆಡ್ಡಿಗೆ ವಿವಾಹ ಮಾಡಿಕೊಡಲಾಗಿತ್ತು, ನಂತರ ಇದು ಎರಡನೆ ಮದುವೆ ಎಂಬ ಸತ್ಯ ತಿಳಿಯಿತು. ಇಬ್ಬರು ಗಂಡು ಮಕ್ಕಳಿದ್ದರೂ ಗಂಡ ಪ್ರತಿದಿನ ವಿನಾಕಾರಣ ಜಗಳ ತೆಗೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಅಲ್ಲದೆ ಬೇರೆ ಹೆಂಗಸಿನ ಜೊತೆ ಅನೈತಿಕ ಸಂಬಂಧವಿರಿಸಿಕೊಂಡಿದ್ದ ಇದನ್ನು ಪತ್ನಿ ನಿರ್ಮಲ ಪ್ರಶ್ನಿಸಿದಕ್ಕೆ ಮತ್ತಷ್ಟು ಕಾಟ ನೀಡುತ್ತಿದ್ದ ಎನ್ನಲಾಗಿದೆ. ಮನೆ ಬಗ್ಗೆ ಕಾಳಜಿವಹಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇದರಿಂದ ಬೇಸತ್ತು ನಿರ್ಮಲ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಈ ಘಟನೆಗೆ ತನ್ನ ಅಳಿಯ ನಾರಾಯಣರೆಡ್ಡಿ ಕಾರಣವೆಂದು ಮೃತ ನಿರ್ಮಲ ತಾಯಿ ವೆಂಕಟಶಿವಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.