ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮವಸ್ತ್ರ ಅಕ್ರಮ ದಾಸ್ತಾನು: ಸದಸ್ಯರಿಂದ ಪ್ರತಿಭಟನೆ

Srinivasa Murthy VN
Updated On : 23 Nov 2013, 1:25 am

ಚಿಂತಾಮಣಿ: ಬಡ ಮಕ್ಕಳಿಗೆ ಸರ್ಕಾರದಿಂದ ನೀಡಬೇಕಾದ ಸಮವಸ್ತ್ರಗಳನ್ನು ಶಿಕ್ಷಣಾಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಿರುವುದರ ವಿರುದ್ಧ ಶಾಸಕರ ಬೆಂಬಲಿತ ನಗರಸಭಾ ಸದಸ್ಯರು ದಾಸ್ತಾನು ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕೆನರಾ ಬ್ಯಾಂಕ್ ಪಕ್ಕದ ಸರ್ಕಾರಿ ಶಾಲೆಯ ರಾಷ್ಟ್ರಕವಿ ಕುವೆಂಪು ಭವನ ಎಂಬ ಕೊಠಡಿಯಲ್ಲಿ ಮಕ್ಕಳ ಸಮವಸ್ತ್ರಗಳನ್ನು ದಾಸ್ತಾನು ಮಾಡಿರುವ ಶಿಕ್ಷಣಾಧಿಕಾರಿಗಳ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬೆಂಬಲಿತ ನಗರಸಭಾ ಸದಸ್ಯರಾದ ಶ್ರೀರಾಮಪ್ಪ, ಆರ್. ಪ್ರಕಾಶ್, ಮಂಜುನಾಥ್ ಪೊಲೀಸರಿಗೆ ದೂರು ನೀಡಿ, ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ನಂಜಪ್ಪ ಮತ್ತು ಸಬ್‌ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ಆಗಮಿಸಿ ತಿಭಟನಾಕಾರರನ್ನು ಸಮಾದಾನ ಪಡಿಸಲು ಯತ್ನಿಸಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಸದಸ್ಯರು, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಬೇಕೆಂದು ಸರ್ಕಾರದ ಸುತ್ತೋಲೆ ಇದ್ದರೂ ಇದನ್ನು ಉಲ್ಲಂಘನೆ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಸಮವಸ್ತ್ರ ವಿತರಣೆ ಮಾಡದೆ ದಾಸ್ತಾನು ಮಾಡಿರುವುದಾಗಿ ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಪ್ರತಿಭಟನಾಕಾರರನ್ನು ಸಮಾದಾನ ಪಡಿಸಿ, ಕಾನೂನು ಚೌಕಟ್ಟಿನಲ್ಲೇ 2013-14 ನೇ ಸಾಲಿನ 1 ರಿಂದ 8 ರವರಿಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲು ಸೂಚಿಸಿರುವುದಾಗಿ ತಿಳಿಸಿದ್ದರೂ ಹಲವು ಸಿಆರ್‌ಪಿಗಳು ವಿಳಂಬ ಆಗಿದೆಯೆಂದು ಮತ್ತು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಜರುಗಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣ.ಜಿ, ಡಿಶ್ ಅಪ್ಪಿ, ರಾಮಾಂಜಿ, ಮಂಜುನಾಥ್, ಮಣಿ, ಮದ್ದೇರಿ ಅಶ್ವಥರೆಡ್ಡಿ, ವಿಶ್ವನಾಥ್, ವನಜಾಕ್ಷಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement