ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ವೆ ಶುಲ್ಕ ಹೆಚ್ಚಳ ವಿರೋಧಿಸಿ ರೈತರ ಪ್ರತಿಭಟನೆ

Srinivasa Murthy VN
Updated On : 23 Nov 2013, 1:25 am

ಬಂಗಾರಪೇಟೆ: ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಮೊದಲೆ ಬರದಿಂದ ತತ್ತರಿಸಿರುವ ರೈತರಿಗೆ ಈಗ ಸರ್ವೆ ಶುಲ್ಕವನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ. ಕೂಡಲೆ ಕಡಿತಗೊಳಿಸುವಂತೆ ಆಗ್ರಹಿಸಿ ರೈತ ಸಂಘದ ಹಾಗೂ ಹಸಿರು ಸೇನೆ ಮುಖಂಡರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಕಳೆದ 9ವರ್ಷಗಳಿಂದ ಕ್ಷೇತ್ರದ ಬರದಿಂದ ತತ್ತರಿಸಿ, ಯಾವುದೇ ಕೃಷಿ ಚಟುವಟಿಕೆಗಳಿಲ್ಲದೆ ರೈತರು ಮಾಡಿದ ಸಾಲ ತೀರಿಸಲಾಗದೆ ಚಿಂತಾಕ್ರಾಂತರಾಗಿದ್ದಾರೆ. ಅಲ್ಲದೆ ಸರ್ಕಾರದ ಕ್ಷೇತ್ರವನ್ನು ಬರಪೀಡಿತ ಎಂದು ಘೋಷಣೆ ಮಾಡಿತ್ತು. ಈ ವರ್ಷ ಸಹ ಬರು ಪೀಡಿತ ಕ್ಷೇತ್ರವೆಂದು ಘೋಷಣೆ ಮಾಡಿದೆ ಪರಿಸ್ಥಿತಿ ಈಗಿರುವಾಗ ಏಕಾಏಕಿಯಾಗಿ ಸರ್ವೆ ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಸರ್ಕಾರದ ಕ್ರಮವೆಂದು ಟೀಕಿಸಿದರು. ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಜಮೀನು ಖಾತೆ ಬದಲಾವಣೆ, ಸರ್ವೆ ಸ್ಕೆಚ್ ಕಡ್ಡಾಯ. ಈ ಹಿಂದೆ 600ಇದ್ದ ಶುಲ್ಕವನ್ನು ಈಗ 1500ಕ್ಕೆ ಏರಿಕೆ ಮಾಡಿರುವುದನ್ನು ಖಂಡಿಸಿದರು.ಇದಲ್ಲದೆ ಪ್ರತಿ ಎಕರೆಗೆ ಹೆಚ್ಚುವರಿಯಾಗಿ 200 ತೆರಬೇಕಾಗಿದೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡದಿದ್ದರೆ ಬರುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ ರೈತರ ಪಹಣಿ, ಮುಟೇಶನ್ ಸಿದ್ಧಪಡಿಸಿ ಕೋಲಾರ ಉಪವಿಭಾಗಾಧಿಕಾರಿ ಕಚೇರಿಗೆ ಕಳುಹಿಸಬೇಕು ಇದರಿಂದ ರೈತರ ಬಹುತೇಕ ಕೆಲಸ ಕಾರ್ಯಗಳು ನೆನೆಗಿದಿಗೆ ಬಿದ್ದು ಪ್ರತಿದಿನ ಕೋಲಾರಕ್ಕೆ ಅಲೆಯುವಂತಾಗಿದೆ,ತಿದ್ದುಪಡಿ ದಾಖಲೆಗಳನ್ನು ತಾಲೂಕು ಮಟ್ಟದಲ್ಲೆ ನಡೆಯಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು. ಮುಂದಾಳತ್ವವನ್ನು ರೈತ ಸಂಘದ ಅಧ್ಯಕ್ಷ ರಾಮೇಗೌಡ, ಶಿವಪ್ಪ, ರಘು, ವೆಂಕಟೇಶ್, ಚಂದ್ರಪ್ಪ,ಶ್ರೀನಿವಾಸ್, ಹೇಮಂತರೆಡ್ಡಿ, ನಾಗರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement