ಎಲ್ಲರೂ ಶೌಚಾಲಯ ಹೊಂದಲು ಕರೆ
ಗೌರಿಬಿದನೂರು: ಗ್ರಾಮೀಣ ಜನತೆ ಉತ್ತಮ ಶೌಚಾಲಯ ವ್ಯವಸ್ಥೆ ಹೊಂದುವ ಮೂಲಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಕರೆನೀಡಿದರು.
ತಾಲೂಕಿನ ಮಂಚೇನಹಳ್ಳಿ ಹೋಬಳಿ ಗೌಡಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಿರ್ಮಲ ಭಾರತ ಯೋಜನೆ ರೂಪಿಸಿದ್ದು 11ಸಾವಿರ ರು.ಗಳನ್ನು ನೀಡುತ್ತಿದೆ. ಎಪಿಎಲ್ ಕಾರ್ಡ್ದಾರರಿಗೆ ನಾಲ್ಕೂವರೆ ಸಾವಿರ ನೀಡುತ್ತಿದ್ದು, ಪ್ರತಿಯೊಬ್ಬರೂ ಇದರ ಲಾಭ ಪಡೆದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.
ಸಾರ್ವಜನಿಕರಿಂದ ಬಂದ ಖಾತೆ ಬದಲಾವಣೆ, ರಸ್ತೆ ರಿಪೇರಿ ಮುಂತಾದ ಕುಂದುಕೊರತೆಗಳನ್ನು ಬಗೆಹರಿಸುವಂತೆ ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ಪಿ.ಎನ್. ಪ್ರಕಾಶ್, ತಾಪಂ ಸದಸ್ಯ ನಾರಾಯಣಸ್ವಾಮಿ, ಸುದರ್ಶನ್, ಬಾಲಕೃಷ್ಣ, ರಂಗೇಗೌಡ, ರಿಯಾಸ್, ವೆಂಕಟೇಶ್ ಇದ್ದರು.