ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೇನ್ನೊಣಗಳ ದಾಳಿ: ರೈತನ ಸಾವು

Srinivasa Murthy VN
Updated On : 24 Nov 2013, 1:00 am

ಚಿಂತಾಮಣಿ: ರೈತನೊಬ್ಬನಿಗೆ ಜೇನು ಹುಳುಗಳ ದಾಳಿಯಿಂದ ತೀವ್ರ ಅಸ್ವಸ್ಥಗೊಂಡ ರೈತನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಣ್ಣಪಗುಟ್ಟ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಣ್ಣಪಗುಟ್ಟ ಗ್ರಾಮದ ರೈತ ವೆಂಕಟರಾಯಪ್ಪ(60) ಎಂಬಾತನು ಹತ್ತಿರದ ಜಗಣ್ಣ ಎಂಬವರ ತೋಟದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಕೆಲಸ ಮಾಡುತ್ತಿರುವಾಗ ಏಕಾಏಕಿ ಜೇನು ಹುಳುಗಳು ಗುಂಪು ಕಟ್ಟಿಕೊಂಡು ಮುತ್ತಿಗೆ ಹಾಕಿ ಕಚ್ಚಿದ ಪರಿಣಾಮ ವೆಂಕಟರಾಯಪ್ಪ ತೀವ್ರ ಗಾಯಗೊಂಡು ಬಟ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ 2 ದಿನಗಳಿಂದ ದಾಖಲಾಗಿ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಯೋಧ ಕಾಣೆ: ದೂರು ದಾಖಲು
ಕೆಜಿಎಫ್: ಯೋಧರೊಬ್ಬರು ಕಾಣೆಯಾಗಿರುವ ಬಗ್ಗೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಪ್ರಕರಣ ವರದಿಯಾಗಿದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ  ಮಸ್ಕಂ ಬಡಾವಣೆಯ ನಿವಾಸಿ ರಾಜ ಎಂಬುವರ ಮಗನಾದ ಜಗದೀಶ್(30) ಎಂಬುವರು ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು ರಜೆಯ ನಿಮಿತ್ತ ತಮ್ಮ ಸ್ವಂತ ಊರಾದ ಕೆಜಿಎಫ್‌ಗೆ ಆಗಮಿಸಿದ್ದರು. ಇದೇ ತಿಂಗಳು 17 ರಂದು ಕರ್ತವ್ಯಕ್ಕೆ ಹಾಜರಾಗಬೇಕಾಗಿರುವುದರಿಂದ ಕೆಜಿಎಫ್‌ನಿಂದ 11 ರಂದು ದೆಹಲಿಗೆ  ಹೊರಟರು. ಆದರೆ ಇಲ್ಲಿವರೆಗೆ ದೆಹಲಿಗೆ ಹೋಗಿ ತಲುಪಿಲ್ಲ ಮತ್ತು ಮೊಬೈಲ್‌ಗೆ ಸಂಪರ್ಕಿಸಲು ಸಾಧ್ಯವಾಗದ ಕಾರಣ ಗಾಬರಿಗೊಂಡ ಯೋಧ ಜಗದೀಶ್ ಅವರ ತಾಯಿ ಮಹೇಶ್ವರಿ ಕೆಜಿಎಫ್‌ನ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಗ್ರಾಮೀಣಾಭಿವೃದ್ಧಿಗೆ ಗಮನ ಹರಿಸಿ
ಟೇಕಲ್: ಶಾಸಕ ಮಂಜುನಾಥಗೌಡ ಟೇಕಲ್ ವ್ಯಾಪ್ತಿಯ ಬಹುತೇಕ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಪ್ರಾತಿನಿಧ್ಯ ನೀಡಬೇಕೆಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು. ತೊರಲಕ್ಕಿ ಗ್ರಾಮದಲ್ಲಿ ನಡೆದ ಜನಸ್ಪಂಧನ ಸಭೆಯಲ್ಲಿ ಮಾತನಾಡಿ, ತೊರಲಕ್ಕಿಯಲ್ಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮೈರಾಡ ಸಂಸ್ಥೆಗಳಲ್ಲಿ ಎನ್‌ಜಿಒಗಳ ಕಾರ್ಯ ಸಾಧನೆ ಮೆಚ್ಚುವಂತಹದು ಎಂದು ನುಡಿದರು. ಸಭೆಯಲ್ಲಿ ಶಾಸಕ ಮಂಜುನಾಥಗೌಡ, ತಹಸೀಲ್ದಾರ್ ಡಾ. ಸುಧಾ ಅವರು ಜನರ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು. ತಹಸೀಲ್ದಾರ್ ಡಾ. ಸುಧಾ ಅವರು ಮಾತನಾಡಿ, ಪಿ ನಂಬರ್ ಬಗ್ಗೆ ತಾಲ್ಲೂಕಿನಲ್ಲಿ ರಾಜಕೃಷ್ಣಾಪುರ ಗ್ರಾಮ ಪರಿಶೀಲನೆ ನಡೆಸುತ್ತಿದ್ದು, ಹಂತ ಹಂತವಾಗಿ ಪಿ ನಂಬರುಗಳನ್ನು ಸರ್ವೇ ಮಾಡಿ ನೀಡಲಾಗುತ್ತದೆ ಎಂದರು. ಗ್ರಾಪಂ ಸದಸ್ಯ ರಮೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement