ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಸ್‌ನಲ್ಲಿ ಹೊಗೆ; ಪ್ರಯಾಣಿಕರ ದೌಡು

Srinivasa Murthy VN
Updated On : 24 Nov 2013, 12:57 pm

ಬಾಗೇಪಲ್ಲಿ: ದಿಢೀರನೇ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಜೀವಹಾನಿಗೆ ಗುರಿಯಾಗುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಿಗೆ ಸಂಭವಿಸುತ್ತಿರುವುದರ ನಡುವೆ ಬಾಗೇಪಲ್ಲಿ ತಾಲೂಕಿನ ವ್ಯಾಪ್ತಿಯ ಎನ್.ಹೆಚ್.7 ರಸ್ತೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡು ಕೆಲ ಹೊತ್ತು ಪ್ರಯಾಣಿಕರು ಆತಂಕಕ್ಕೀಡಾದರು.
ಶನಿವಾರ ಸಂಜೆ 5 ಗಂಟೆ ಸಮಯದಲ್ಲಿ ಆಂಧ್ರದ ಪುಟ್ಟಪರ್ತಿಯಿಂದ ಬೆಂಗಳೂರು ಕಡೆ ಮಾರ್ಗವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸು ತಾಲೂಕಿನ ಸಮೀಪದ ಎನ್.ಹೆಚ್.7 ರ ಬಳಿ ಬಂದಾಗ ಬಸ್ಸಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ರಮೇಶ್ ವಾಹನವನ್ನು ನಿಲ್ಲಿಸಿ ಬಸ್ಸಿನಲ್ಲಿದ್ದ 40 ಮಂದಿ ಪ್ರಯಾಣಿಕರನ್ನೂ ಕೆಳಗೆ ಇಳಿಸಿದ್ದಾನೆ. ನಂತರ ಆತ ವಾಹನದ ಎಂಜಿನ್ ಪರಿಶೀಲಿಸಿದಾಗ, ರೇಡಿಯೇಟರ್ ಬಿಸಿಯಾಗಿರುವುದರಿಂದ ಹೊಗೆ ಬರುತ್ತಿದೆ ಎಂದು ತಿಳಿದು ಬಂದಿದ್ದು ಅದಕ್ಕೆ ನೀರು ಹಾಕಿ ತಣ್ಣಗಾಗಿಸಿದ್ದಾನೆ. ಹಾಗೆಯೇ ಕೆಲ ಸಮಯ ಅಲ್ಲಿಯೇ ನಿಲ್ಲಿಸಿದ ನಂತರ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದಾನೆ.
ಆಂಧ್ರ ಮತ್ತು ರಾಜ್ಯದ ಹಾವೇರಿ ಬಳಿ ಬಸ್ಸುಗಳು ಇದ್ದಕ್ಕಿದಂತೆ ಸುಟ್ಟು ಹೋಗಿ ಅನೇಕ ಪ್ರಯಾಣಿಕರು ಪ್ರಾಣ ಕಳೆದುಕೊಂಡ ಘಟನೆ ನೆನೆಪಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತು.
ತಪಾಸಣೆಗೆ ಒತ್ತಾಯ; ಬಸ್ಸುಗಳು ಸಂಚರಿಸುವ ಮುನ್ನಾ ಸೂಕ್ತ ರೀತಿಯಲ್ಲಿ ವಾಹನದ ತಪಾಸಣೆ ಮಾಡಿದ ನಂತರವಷ್ಟೇ ಸೇವೆಗೆ ಬಿಡಬೇಕು. ಅಲ್ಲದೇ ಹಳೆಯ ಬಸ್ಸುಗಳನ್ನು ಹೆಚ್ಚಿಗೆ ಬಳಸಲು ಮುಂದಾಗಬಾರದು. ಅನಾಹುತಗಳಾದ ಮೇಲೆ ಸಂತಾಪ ವ್ಯಕ್ತಪಡಿಸುವುದರ ಬದಲು ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement