ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೈತರ ಜಮೀನು ಸ್ವಾಧೀನ ಬೇಡ: ಲಕ್ಷ್ಮೀನಾರಾಯಣರೆಡ್ಡಿ

Srinivasa Murthy VN
Updated On : 25 Nov 2013, 12:18 pm

ಬಾಗೇಪಲ್ಲಿ: ಸರ್ಕಾರಿ ಜಮೀನಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಅಭ್ಯಂತರವಿಲ್ಲ, ಆದರೆ ಕೈಗಾರಿಕೆಗಳ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಜಮೀನನ್ನು ಕಸಿದುಕೊಳ್ಳಲು ಸರ್ಕಾರ ಮುಂದಾದರೆ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ ಆಕ್ರೋಶ ವ್ಯೆಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಂಡರೆಡ್ಡಿಪಲ್ಲಿ ಗ್ರಾಮ ವ್ಯಾಪ್ತಿಯ 192 ಎಕರೆ ರೈತರ ಜಮೀನನ್ನು ಕೆಐಎಡಿಬಿಗೆ ಭೂ ಸ್ವಾಧೀನವಾಗಿರುವುದಕ್ಕೆ ರೈತರು ಹಾಗೂ ರೈತ ಸಂಘ ಹಲವು ವರ್ಷಗಳಿಂದ ವಿರೋಧಿಸುತ್ತಲ್ಲೇ ಬರುತ್ತಿರುವುದರ ಜೊತೆಗೆ ಕಾನೂನು ಸಮರವನ್ನು ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯ ಭೂ ಸ್ವಾಧೀನಕ್ಕೆ ತಡೆಯಾಜ್ಞೆ ನೀಡಿದೆ. 2008ರಲ್ಲಿ ಜಿಲ್ಲಾಧಿಕಾರಿಗಳ ವರದಿ ಆಧಾರದಂತೆ ಪಟ್ಟಣದಿಂದ 5-10 ಕಿ.ಮಿ ಒಳಗೆ ಸಮಾರು 3,800 ಎಕರೆ ಸರ್ಕಾರಿ ಜಮೀನು ಇರುವುದರಿಂದ 192 ಎಕರೆ ರೈತರ ಜಮೀನನ್ನು ಕೈ ಬಿಟ್ಟು ಸರ್ಕಾರಿ ಜಮೀನಿನ್ನು ಕೈಗಾರಿಕೆಗಳ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಆದೇಶ ನೀಡಿದ್ದು ಈ ವಿಚಾರದಲ್ಲಿ ಉಚ್ಚನ್ಯಾಯಾಲಯದಲ್ಲಿ ರೈತರಿಗೆ ಜಯ ಸಿಕ್ಕಿದೆ. ಆದರೆ, ಇತ್ತೀಚೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಎಚ್. ಸಿದ್ದಪ್ಪ ಕೈಗಾರಿಕೆಗಳ ಅಭಿವೃದ್ಧಿಗೆ ಚಾಲನೆ ನೀಡುವುದಾಗಿ ಪ್ರಸ್ತಾಪಿಸಿರುವುದು ಖಂಡನೀಯ ಎಂದರು. ಬಾಜೀಸಾಬ್ ಮಾತನಾಡಿದರು. ರಘುನಾಥರೆಡ್ಡಿ, ಆದಿನಾರಾಯಣರೆಡ್ಡಿ, ಕಮಲಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement