ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ: ಉಪ ಸಭಾಪತಿ ಶಿವಶಂಕರರೆಡ್ಡಿ

Srinivasa Murthy VN
Updated On : 26 Nov 2013, 1:37 am

ಗೌರಿಬಿದನೂರು: ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನ ಎಂದು ಉಪಸಭಾಪತಿ ಎನ್.ಹೆಚ್. ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು. ಅವರು ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಎನ್.ಹೆಚ್. ಶಿವಶಂಕರರೆಡ್ಡಿ ಅಭಿಮಾನಿಗಳ ಬಳಗ ಹಾಗೂ ಮೆಗಸ್ಟಾರ್ ಚಿರಂಜೀವಿ ಅಭಿಮಾನಿಗಳ ಬಳಗ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾತನಾಡಿದರು. ರಕ್ತದಾನದಿಂದ ಒಂದು ಜೀವ ಉಳಿಸುವ ಒಳ್ಳೆಯ ಕೆಲಸ ಮಾಡಿದಂತಾಗುತ್ತದೆ, ಅದರಲ್ಲೂ ಶಸ್ತ್ರ ಚಿಕಿತ್ಸೆ ಮತ್ತು ಅಪಘಾತಗಳಲ್ಲಿ ಉಂಟಾಗುವ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ ಶಿಬಿರಗಳಲ್ಲಿ ರಕ್ತದಾನ ಮಾಡಿದರೆ ಅದು ಸರ್ಕಾರದ ರಕ್ತ ನಿಧಿ ಬ್ಯಾಂಕ್‌ಗೆ ತಲುಪಿ ರೋಗಿಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಗೆ 20,000 ರು. ಚೆಕ್ ನೀಡಿದರು.  ಚಿರಂಜೀವಿ ಆಂದ್ರ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ಪ್ರಸಾದೆ ರೆಡ್ಡಿ ಮಾತನಾಡುತ್ತ ಚಿರಂಜೀವಿ ಅಭಿಮಾನಿಗಳ ಸಂಘ ಕಳೆದ 20 ವರ್ಷಗಳಿಂದ ರಕ್ತದಾನ ಶಿಬಿರಗಳು ಆಂದ್ರದಲ್ಲಿ ನಡೆಸುತ್ತ ಬಂದಿದ್ದು ಈಗ ಗೌರಿಬಿದನೂರಿನಲ್ಲಿ ಈ ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತೋಷವಾಗುತ್ತದೆ. ಇಲ್ಲಿನ ಯುವಕರ ತಂಡ ಇಂತಹ ಶಿಬಿರಗಳಲ್ಲಿ ರಕ್ತದಾನಮಾಡಿ ಮನುಷ್ಯನ ಜೀವ ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ನಿರೂಪಣೆ ಉಪಾನ್ಯಾಸಕ ಕೆ. ವರಹಮೂರ್ತಿ, ಪುರಸಭಾ ಮಾಜಿ ಅಧ್ಯಕ್ಷೆ ಗೀತಜಯಂಧರ್ ಎಸ್. ಎಸ್. ರೆಡ್ಡಿ ಮುಂತಾದವರು ಭಾಗವಹಿಸಿದರು.

ಟ್ರ್ಯಾಕ್ಟರ್‌ನಿಂದ ಬಿದ್ದು ಬಾಲಕ ಸಾವು
ಚಿಂತಾಮಣಿ: ಸರಕು ಸಾಕಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮೇಲಿನಿಂದ ಕೆಳಗೆ ಬಿದ್ದು ಬಾಲಕನೊಬ್ಬ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾಪುರ ಗ್ರಾಮದ ಬಳಿ ನಡೆದಿದೆ. ತಾಲೂಕಿನ ಮೈಲಾಪುರ-ನಾಗದೇನಹಳ್ಳಿ ಮಾರ್ಗದ ಬಳಿ ಸರಕು ಸಾಕಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ವಾಹನ ಮೇಲಿನಿಂದ ಕೆಳಗೆ ಬಿದ್ದ ಬಾಲಕ ಶಶಿ (10) ಮೃತಪಟ್ಟಿರುವ ದುರ್ದೈವಿ.  ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಸಬ್ ಇನ್ಸೆಪೆಕ್ಟರ್ ರಾಘವೇಂದ್ರ ಆಗಮಿಸಿ ಸ್ಥಳ ಪರಿಶೀಲಿಸಿದ ನಂತರ ಅಪಘಾತಕ್ಕೀಡಾಗಿದ್ದ ಟ್ರ್ಯಾಕ್ಟರ್‌ನನ್ನು ವಶಕ್ಕೆ ಪಡೆದು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಧು ಪ್ರಿಯಕರನ ಜೊತೆ ಎಸ್ಕೇಪ್
ಚಿಂತಾಮಣಿ: ಮದುವೆ ಮನೆಯಲ್ಲಿ ವಧು ವರರ ಪೋಷಕರು ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದ ವೇಳೆಯಲ್ಲಿ ತಾಳಿ ಕಟ್ಟುವ ಮುನ್ನ ಕಲ್ಯಾಣ ಮಂಟಪದಿಂದ ಮಧು ಪ್ರಿಯಕರನ ಜೊತೆ ಪರಾರಿ ಆಗಿರುವ ಘಟನೆ ಪಟ್ಟಣ ಹೊರವಲಯದ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಘಟನೆ ವಿವರ:  ಶಿಡ್ಲಘಟ್ಟ ತಾಲೂಕಿನ ಮಲ್ಲೂರು ಗ್ರಾಮದ ಮಧು ಕುಮಾರ್ ಜೊತೆ ಸಂಬಂಧಿಕರ ಹಾಗೂ ಪೋಷಕರ ಒಪ್ಪಂದಂತೆ ಬೆಂಗಳೂರು ನಗರದ ಕೆ.ಆರ್.ಪುರಂ ನಿವಾಸಿಯೊಬ್ಬರ ರೂಪ (ಹೆಸರು ಬದಲಾಯಿಸಿದೆ) ಧಾರೆ ಎರೆಯಲು ಸಿದ್ಧತೆ ನಡೆಸುತ್ತಿರುವ ಕೆಲವೇ ನಿಮಿಷಗಳ ಮುಂಚೆ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ಪಟ್ಟಣದ ಹೊರವಲಯದ ಬೂರಗಮಾಕಲಹಳ್ಳಿ ಸಂಜೀವ ಸಮುದಾಯ ಭವನದಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ವಧು, ವರ ಕಡೆಯವರು ಪೊಲೀಸರು ದೂರು ನೀಡಿಲ್ಲವೆಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement