ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಶ್ವ ವಿಕಲಚೇತನರ ದಿನಾಚರಣೆ

Srinivasa Murthy VN
Updated On : 26 Nov 2013, 1:36 am

ಗೌರಿಬಿದನೂರು: ಸಮಾಜದಲ್ಲಿ ವಿಕಲಚೇತನರು ಎಲ್ಲರಂತೆ ಸಬಲರಾಗಲು ಕ್ರೀಡೆಗಳಲ್ಲಿ ಭಾಗವಹಿಸಿದಾಗ ಮಾನಸಿಕವಾಗಿ ಅಂಗವಿಕಲರೆಂಬ ಕೀಳರಿಮೆ ಎಂಬ ಭಾವನೆ ಹೋಗಲಾಡಿಸಬಹುದು ಎಂದು ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿ ಬಯಪ್ಪರೆಡ್ಡಿ ತಮ್ಮ ಅಭಿಪ್ರಾಯ ತಿಳಿಸಿದರು.
ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟೆ ಆವರಣದಲ್ಲಿ ಹಮ್ಮಿಕೊಂಡಿದ್ದ  ಸಾರ್ವಜನಿಕ ಇಲಾಖೆ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ವಿಕಲರಚೇತನರ ದಿನಾಚರಣೆ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡುತ್ತ ದೈಹಿಕವಾಗಿ ಅಂಗ ವಿಕಲರು ಆಗಿರಬಹುದು ಆದರೆ ಮಾನಸಿಕವಾಗಿ ಯಾರು ಅಂಗವಿಕಲರಾಗಲು ಸಾಧ್ಯವಿಲ್ಲ ಸಮಾಜಕ್ಕೆ ಏನೂ ಕೊಡುಗೆ ಕೊಡದೆ ವಿನಾಕಾರಣ ಪರರ ದೂಷಣೆ ಮಾಡುವವರು  ಆರೋಪ ಮಾಡುವವರೆ ನಿಜವಾದ ಅಂಗವಿಕಲರು ಎಂದು ತಿಳಿಸಿದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಸಿದ್ದರಾಮಯ್ಯ ಮಾತನಾಡುತ್ತ ಅಂಗವಿಕಲರು ಕೈಗಳು ಊನವಾಗಿದ್ದರೂ ಕಾಲಿನ ಬೆರಳಿನಲ್ಲಿ ಪರೀಕ್ಷೆ ಬರೆದು  ಪಾಸಾಗಿರುವ ಉದಾಹರಣೆಗಳಿದ್ದು ಶ್ರಮ ಮತ್ತು ಸಾಧನೆಗಳ ಮುಖಾಂತರ ಅಂಗವಿಕಲರೆಂಬ ಭಾವನೆ ಹೋಗಲಾಡಿಸಬಹುದು. ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಸಂಯೋಜಕರು ಕೃಷ್ಣಪ್ಪ, ರವಿಕುಮಾರ್, ಹಿರಿಯ ಪತ್ರಕರ್ತ ಲೇಪಾಕ್ಷಿ       ಸಂತೋಷ್ ರಾವ್ ಮತ್ತು ಎಂ.ಆರ್. ಡಬ್ಲು ಸಂಚಾಲಕ ಕೃಷ್ಣಪ್ಪ ಭಾಗವಹಿಸಿದ್ದರು. ಭಾಗ್ಯಮ್ಮ ಪ್ರಾರ್ಥಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement