ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆನಿ ಜಾಯ್ಗೆಗೆ ರಾಷ್ಟ್ರಪತಿ ಪದಕ

Srinivasa Murthy VN
Updated On : 15 Oct 2013, 1:31 am

ಕೋಲಾರ: ಸ್ಕೌಟ್ಸ್ಗೈಡ್ಸ್ನಲ್ಲಿ  ಉತ್ತಮ ಕೌಶಲ್ಯ-ತರಬೇತಿ ಹಾಗೂ ಪ್ರದರ್ಶನ  ಹಿನ್ನೆಲೆಯಲ್ಲಿ  ಕೋಲಾರದ  ಆನಿ ಜಾಯ್ಸ್  ಎಂಬ ವಿದ್ಯಾರ್ಥಿನಿಗೆ ಗೈಡ್ಸ್ ವಿಭಾಗದಲ್ಲಿ  ರಾಷ್ಟ್ರಪತಿಯವರ ಪ್ರಶಸ್ತಿ ಪುರಸ್ಕಾರ ಲಭಿಸಿದೆ.  
ನಗರದ ಕನಕನ ಪಾಳ್ಯದಲ್ಲಿ  ವಾಸವಾಗಿರುವ ತಂದೆ ಸ್ವಾಮಿದಾಸ್, ತಾಯಿ ಮಿನಿಮೈಕಲ್ ದಂಪತಿಗಳ ಪುತ್ರಿಯಾಗಿರುವ ಈಕೆ, ಇಲ್ಲಿನ ಮಹಿಳಾ  ಸಮಾಜ ಕಾಲೇಜಿನ ಪ್ರಥಮ ಪಿಯುಸಿ  ವಿದ್ಯಾರ್ಥಿನಿಯಾಗಿದ್ದಾಳೆ. ದೆಹಲಿಯ ರಾಜಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ಮುಖರ್ಜಿ ಅವರು 2012-13 ನೇ ಸಾಲಿನ ಈ ರಾಷ್ಟ್ರೀಯ ಪುರಸ್ಕಾರವನ್ನು  ವಿತರಿಸಿದರು. ಗೈಡ್ಸ್ ಶಿಕ್ಷಕಿ  ಎನ್. ಉಮಾದೇವಿ ಅವರ ತರಬೇತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ  10 ವರ್ಷಗಳಿಂದ ಎಲ್ಲಾ ರೀತಿಯ ತರಬೇತಿಗಳನ್ನು ಪೂರೈಸಿ, ಅದರಲ್ಲಿ ಉತ್ತಮ ಪ್ರದರ್ಶನ ಕೌಶಲ್ಯದೊಂದಿಗೆ ಗಳಿಸಿದ ಅಂಕಗಳು ಹಾಗೂ ಉತ್ತಮ ಹಂತ ತಲುಪಿ ಅನೇಕ ಪುರಸ್ಕಾರ ಪಡೆದಿದ್ದಾರೆ.  ಈಕೆಯ ಸಹೋದರ ಆಂಡ್ರೊ ಮೈಕಲ್ಗೆ ಸ್ಕೌಟ್ಸ್ ವಿಭಾಗದಲ್ಲಿ 2011-12 ನೇ ಸಾಲಿನಲ್ಲಿ ರಾಜ್ಯ ಪುರಸ್ಕಾರ ಲಭಿಸಿದ್ದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.

ಉದ್ಘಾಟನೆಗೆ ಮೊದಲೇ ಶಿಥಿಲಾವಸ್ಥೆ ತಲುಪಿದ ಭವನ
ಬಂಗಾರಪೇಟೆ: ಸಮುದಾಯ ಭವನ ಪೂರ್ಣಗೊಂಡು ನಾಲ್ಕು ವರ್ಷಗಳೇ ಕಳೆದು ಉದ್ಘಾಟನೆಗೆ ಮೊದಲೆ ಶಿಥಿಲಾವಸ್ಥೆಗೆ ಜಾರಿದೆ.
ಪಟ್ಟಣದ ಸಂಜಯಗಾಂಧಿನಗರದಲ್ಲಿ ಪುರಸಭೆ ನಾಲ್ಕು ವರ್ಷಗಳ ಹಿಂದೆ ಐಡಿಎಸ್ಎಂಸಿ ಯೋಜನೆಯಲ್ಲಿ ಸುಮಾರು ರು. 75ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ಕಟ್ಟಲು ಭೂಸೇನ ನಿಗಮಕ್ಕೆ ಕೊಡಲಾಗಿತ್ತು. ಆದರೆ ಅವರು ವಿಳಂಬವಾಗಿ ಕಾಮಗಾರಿ ಪ್ರಾರಂಭಿಸಿದ್ದರಿಂದ ಅಂದಾಜು ವೆಚ್ಚಕ್ಕಿಂತಲೂ ಕಾಮಗಾರಿ ಅಧಿಕವಾಗಿದೆ.
ಕಾಮಗಾರಿ ಪೂರ್ಣಗೊಂಡಿದ್ದು, ಭೂಸೇನೆ ನಿಗಮಕ್ಕೆ ಹೆಚ್ಚುವರಿ ಹಣ ಪಾವತಿ ಮಾಡದ ಕಾರಣ ಕಾಮಗಾರಿ ಪೂರ್ಣಗೊಂಡಿದ್ದರೂ ಪುರಸಭೆಗೆ ಬೀಗ ಹಸ್ತಾಂತರಿಸದ ಕಾರಣ ನಾಲ್ಕು ವರ್ಷಗಳಿಂದ ಕಟ್ಟಡ ನಿರ್ವಹಣೆಯ ಕೊರತೆಯಿಂದಾಗಿ ಪಾಳು ಬಿದ್ದಿದೆ. ಭವನದ ಕಿಟಕಿ ಗಾಜುಗಳು ಪುಡಿಪಿಡಿಯಾಗಿದೆ, ಬಣ್ಣ ಮಾಸಿದೆ. ಶಾಸಕ ಎಸ್.ಎನ್. ನಾರಾಯಣಸ್ವಾಮಿ ಭವನ ವಿಕ್ಷೀಸಿ ತ್ವರಿತವಾಗಿ ಸಮಸ್ಯೆ ಬಗೆಹರಿಸಿ ಲೋಕಾರ್ಪಣೆ ಮಾಡುವುದಾಗಿ ಹೇಳಿ ನಾಲ್ಕು ತಿಂಗಳಾದರು ಭರವಸೆ ಈಡೇರಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement