ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಮು ಸೌಹಾರ್ದತೆಗೆ ಮನವಿ

Srinivasa Murthy VN
Updated On : 15 Oct 2013, 1:33 am

ಬಾಗೇಪಲ್ಲಿ: ಹಿಂದೂ-ಮುಸ್ಲಿಮರ ನಡುವೆ ಈವರೆಗೆ ಕೋಮು ಗಲಭೆಗಳು ನಡೆದಿಲ್ಲ. ಮುಂದೆ ನಡೆಯುವುದು ಬೇಡ. ಇಂತಹ ಶಾಂತಿ ವಾತಾವರಣ ಕಾಪಾಡಿಕೊಂಡು ಹೋಗಬೇಕು ಎಂದು ಆರಕ್ಷಕ ಉಪ ನಿರೀಕ್ಷಕ ವಿ. ಮುನಿರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಕ್ರೀದ್ ಮತ್ತು ವಿಜಯದಶಮಿ ಹಬ್ಬಗಳ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿ ಅಹಿತಕರ ಘಟನೆಗಳು ಸಂಭವಿಸುವುದು ಬಹಳ ವಿರಳ. ಯಾವುದೇ ಧರ್ಮಗಳಿಗೆ ಸೇರಿದ ಹಬ್ಬಗಳನ್ನು ಆಚರಣೆ ಮಾಡುವ ಸಮಯದಲ್ಲಿ ಎಲ್ಲಾ ಧರ್ಮದವರು ಪ್ರೀತಿ ವಿಶ್ವಾಸದಿಂದ ಹಬ್ಬದಲ್ಲಿ ಭಾಗವಹಿಸುವಂತೆ ಆಹ್ವಾನವನ್ನು ನೀಡುವ ಮೂಲಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ವೃತ್ತ ನಿರೀಕ್ಷಕ ಸಿ. ವಸಂತ್ ಮಾತನಾಡಿ, ಹಿಂದಿನ ಅಧಿಕಾರಿಗಳಿಗೆ ನೀಡಿರುವಂತೆ ಸಹಕಾರ ತಮಗೂ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
 ನಾಗರಿಕರು ಮಾತನಾಡಿ, ಇಲ್ಲಿ ಶಾಂತಿಯನ್ನು ಕದಡುವಂತಹ ಕೆಲಸಕ್ಕೆ ಅವಕಾಶವಿಲ್ಲ, ಇಲ್ಲಿ ಎಲ್ಲಾ ಕೋಮಿನವರು ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದು ಮುಂದಿನ ದಿನಗಳಲ್ಲಿಯೂ ಇದೇ ರೀತಿ ನಡೆದುಕೊಂಡು ಹೋಗುತ್ತೇವೆ ಎಂದರು.  
ನಂತರ ಪಟ್ಟಣದ ಪ್ರಮುಖ ರಸ್ತೆ ಸೇರಿದಂತೆ ಗಂಗಮ್ಮ ಗುಡಿ ರಸ್ತೆ, ನಾಮಾ ಅಂಗಡಿ ರಸ್ತೆ ಹಾಗೂ ಎಸ್ಬಿಎಂ ರಸ್ತೆಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸುವುದು, ನಿಲ್ಲಿಸುತ್ತಿದ್ದು ಇದರಿಂದಾಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.  ಅಪರಾಧ ವಿಭಾಗದ ಆರಕ್ಷಕ ಉಪ ನಿರೀಕ್ಷಕ ಕೃಷ್ಣಪ್ಪ, ಪುರಸಭೆ ಸದಸ್ಯ ಬಿ.ಎನ್. ಶ್ರೀನಿವಾಸ್, ನಂಜುಂಡಪ್ಪ, ರಿಜ್ ವಾನ್ ಸಾಬ್, ಸೈಯದ್ಕಲೀಮುಲ್ಲಾ ಸಭೆಯಲ್ಲಿ ಭಾಗವಹಿಸಿದ್ದರು.

ರೋಗದಿಂದ ಮೃತಪಟ್ಟ ಹಸು ಅಂತ್ಯಕ್ರಿಯೆ
ಚಿಂತಾಮಣಿ: ಕಾಲುಬಾಯಿ ಜ್ವರದಿಂದ ಮೃತಪಟ್ಟ ಸೀಮೆಹಸುವಿಗೆ ಹಿಂದು ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಿರುವ ಘಟನೆ ಚೊಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ.
2 ಹಸುಗಳು ರೋಗದಿಂದ ಮೃತ ಪಟ್ಟಿರುವುದರಿಂದ ತಾಲೂಕಿನ ಚೊಕ್ಕಹಳ್ಳಿ ಗ್ರಾಮಸ್ಥರು ಹಸುಗಳನ್ನು ಹಿಂದೂ ಸಂಪ್ರದಾಯದಂತೆ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಸಪಲಮ್ಮ ದೇವರಿಗೆ ಪ್ರಾರ್ಥನೆ: ಚೊಕ್ಕಹಳ್ಳಿ ಗ್ರಾಮದಲ್ಲಿ ಕಳೆದ 1 ತಿಂಗಳಿಂದ ಜಾನುವಾರುಗಳಿಗೆ ರೋಗ ಹರಡಿ ರೈತರು ಸಂಕಷ್ಟ ಎದುರಿಸುತ್ತಿದ್ದು, ಪಶು ವೈದ್ಯರು ಬಂದರೂ ರಾಸುಗಳಿಗೆ ಗುಣವಾಗದ ಪರಿಣಾಮ ಗ್ರಾಮಸ್ಥರು ಸೇರಿ ಗ್ರಾಮದೇವತೆ ಸಪಲಮ್ಮ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದಿರುವುದರಿಂದ ರೈತರು ವಲಸೆ ಹೋಗುವ ಪರಿಸ್ಥಿತಿ ಉದ್ಭವಗೊಂಡಿದೆಯೆಂದು ಗ್ರಾಮಸ್ಥರಾದ ಪದ್ಮನಾಬಯ್ಯ,ಪಟೇಲ್ ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ಕೃಷ್ಣಪ್ಪ, ಬೊಮ್ಮನಹಳ್ಳಿ ನಾಗರಾಜ್, ಇಸ್ಕೋಲಪ್ಪ, ದೇವರಾಜ್, ಲಕ್ಷ್ಮಣರೆಡ್ಡಿ, ಗೋಪಾಲಪ್ಪ,ಮುರಳಿ, ಅನ್ನಯ್ಯ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement