ಮಾಲೂರಿನಲ್ಲಿ ವಿಜೃಂಭಣೆಯ ನವರಾತ್ರಿ ಆಚರಣೆ
ಮಾಲೂರು: ಇಲ್ಲಿನ ವಿಶ್ವ ಹಿಂದು ಪರಿಷತ್ ಹಾಗೂ ದುರ್ಗಾ ಸೇವಾ ಸಮಿತಿ ಪಟ್ಟಣದ ಮಾರಿಕಾಂಬ ದೇವಾಲಯ ಬಳಿ ಶ್ರೀ ದುರ್ಗೆ ಸ್ಥಾಪಿಸಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು.
ಕಳೆದ 5 ರಿಂದ ಪ್ರಾರಂಭವಾದ ನವರಾತ್ರಿ ಉತ್ಸವದಲ್ಲಿ ಪ್ರತಿ ಸಂಜೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಚಂದ್ರಶೇಖರ್ ನಾದಸ್ವರ ವಾದನ, ಕೇರಳದ ಕಾಸರಗೋಡುನ ವಿದ್ವಾನ್ ಪುಂಡರೀಕಾಕ್ಷ ರವರಿಂದ ಹರಿಕಥೆ, ಬೆಂಗಳೂರಿನ ಕರಾವಳಿ ಯಕ್ಷಗಾನ ತಂಡದವರಿಂದ ದುರ್ಗಾ ಹೋಮ, ಅಂತಾರಾಷ್ಟ್ರೀಯ ವಿದ್ವಾನ್ ಗಿರಿಧರ್ ಮತ್ತು ತಂಡದವರಿಂದ ಸಾಂಪ್ರದಾಯಕ ವಾದ್ಯಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಶ್ರೀ ದುರ್ಗಿ ಪ್ರತಿಮೆ ಮುಂಭಾಗ ದುರ್ಗಾಷ್ಠಮಿ ಅಂಗವಾಗಿ ದುರ್ಗ ಪೂಜೆ-ಹೊಮ ಹಮ್ಮಿಕೊಳ್ಳಲಾಗಿತ್ತು.
ಇಪ್ಪತ್ತುಕ್ಕೂ ಹೆಚ್ಚು ದಂಪತಿಗಳು ಹೋಮ-ಹವನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೋಮವಾರ ಮಧ್ಯಾಹ್ನ ಶ್ರೀ ದುರ್ಗಾ ಮಾತೆಯನ್ನು ಪಟ್ಟಣದಲ್ಲಿ ಮೆರವಣಿಗೆ ಮೂಲಕ ವಿರ್ಸಜಿಸಲಾಯಿತು.
ವಿಜಯ ದಶಮಿ ಆಚರಣೆ
ಮಾಲೂರು: ಇಲ್ಲಿನ ಬಂಗಾರಪೇಟೆ ವೃತ್ತದ ಸೌಮ್ಯ ಸ್ವರೂಪಿನಿ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ವಿಜಯ ದಶಮಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ಸೌಮ್ಯ ಸ್ವರೂಪಿಣಿ ಕಾಳಿಕಾಂಬ ದೇವಿಗೆ ಮಹಿಷಾಸುರ ಮರ್ಧಿನಿ ಅಲಂಕಾರ ಮಾಡಿ ಪೂಜಿಸಲಾಯಿತು. ಧಾರ್ಮಿಕ ಪೂಜಾ ವಿಧಿ ವಿಧಾನದಲ್ಲಿ ಕಬಾಬ್ ಕೃಷ್ಣಪ್ಪ, ಜಿ.ಪಿ.ಎಲ್. ವೆಂಕಟೇಶ್, ಸಂಪಂಗಿ, ಸುಬ್ರಮಣಿ, ಸಿ. ವೆಂಕಟರಾಯಪ್ಪ,ನಾರಾಯಣಪ್ಪ ಇದ್ದರು.