ಮೈಸೂರಲ್ಲಿ ಮಿಂಚಿದ ಕೋಲಾರದ ಸ್ತಬ್ಧಚಿತ್ರ
ಕಪ್ರ ವಾರ್ತೆ, ಕೋಲಾರ, ಅ.14
ಈ ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಕೋಲಾರ ಜಿಲ್ಲಾ ಪಂಚಾಯಿತಿಯ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.
ಕನ್ನಡದ ಆಸ್ತಿ ಎಂದೇ ಖ್ಯಾತ ನಾಮರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಇರುವ ಮಾಸ್ತಿಯವ ಮನೆ ಹಾಗೂ ಮಾಸ್ತಿ ವಿರಚಿತ ಕಾಕನಕೋಟೆಯ ನಾಟಕದ ದೃಶ್ಯಾವಳಿಗಳು ದಸರಾ ಜಂಬೂ ಸವಾರಿ ನೋಡಲು ಸೇರಿದ್ದ ಲಕ್ಷಾಂತರ ಜನತೆಯನ್ನು ಆಕರ್ಷಿಸಿತು.
ಪ್ರಸ್ತುತ ಮಾಸ್ತಿಯವರ ಮನೆ ಗ್ರಂಥಾಲಯ ಹಾಗೂ ಸಾಹಿತ್ಯ ಭವನವಾಗಿ ಮಾರ್ಪಟ್ಟಿದೆ. ಈ ಭವನವನ್ನು ಹೊಲುವ ಸ್ತಬ್ಧ ಚಿತ್ರವನ್ನು ಕೋಲಾರ ಜಿಲ್ಲಾ ಪಂಚಾಯಿತಿ ಸಾದರಪಡಿಸಿದೆ. ಮಾಸ್ತಿಯವರ ಮನೆ, ಮಾಸ್ತಿಯವರ ಪುತ್ಥಳಿ ಹಾಗೂ ಕಾಕನಕೋಟೆಯ ಕಥೆಯಲ್ಲಿನ ಪಾತ್ರದಾರಿಗಳ ಪ್ರತಿಕೃತಿಗಳನ್ನು ಅಳವಡಿಸುವ ಮೂಲಕ ಮಾಸ್ತಿಯವರ ಸಾಹಿತ್ಯವನ್ನು ನಾಡಿನ ಜನತೆಗೆ ಮಾತ್ರವಲ್ಲದೆ ದೇಶ ವಿದೇಶಿಗರಿಗೂ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸ್ತಬ್ಧಚಿತ್ರ ಪ್ರದರ್ಶನದ ಉಸ್ತುವಾರಿ ವಹಿಸಿದ್ದ ಕೋಲಾರ ಜಿಲ್ಲಾ ಕೈಗಾರಿಕಾ ಸಂಸ್ಥೆಯ ಅಧಿಕಾರಿ ರವೀಂದ್ರ ಅವರು ಕಳೆದ 15 ದಿನಗಳಿಂದ ಮೈಸೂರಿನಲ್ಲೇ ಇದ್ದು ಸಿದ್ಧಪಡಿಸಿದ್ದಾರೆ.
ಗುಜರಾತಿ ಸಮುದಾಯದಿಂದ ನವರಾತ್ರಿ ಆಚರಣೆ
ಕೆಜಿಎಫ್: ಗುಜರಾತಿ ಸಮುದಾಯ ವತಿಯಿಂದ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ ಶ್ರೀ ದುರ್ಗಾ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಕಳೆದ 9 ದಿನಗಳಿಂದ ಆಚರಿಸುತ್ತಿರುವ ಪೂಜೆಯಲ್ಲಿ ದೇವಿಯ ಆರಾಧನೆ, ಕೀರ್ತೆನೆಗಳು, ಅಕಂಡ ಜ್ಯೋತಿ, 56 ಮಾದರಿಯ ಸಿಹಿಗಳು, ಸಂಗೀತ ಗಾಯನ ಮತ್ತು ಆಕರ್ಷಕ ದಾಂಡಿಯಾ ನೃತ್ಯದಲ್ಲಿ ಮಹಿಳೆಯರು ಭಾಗವಹಿಸಿ ಭಕ್ತಾಧಿಗಳ ಗಮನ ಸೆಳೆದರು.
ಅ.5 ರಿಂದ ಪ್ರತಿದಿನ ದುರ್ಗಾ ದೇವಿಗೆ ವಿವಿಧ ರೀತಿಯ ಅಲಂಕಾರ, ನವಗ್ರಹ ಹವನ, ಗಣಪತಿ ಹವನ, ಸುಮಂಗಲಿ ಹವನ, ಮೃತ್ಯಂಜಯ ಹವನ, ವಿಶೇಷ ಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ದಾಂಡಿಯಾ ನೃತ್ಯ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಡೆದವು. ಗುಜರಾತಿ ಮತ್ತು ರಾಜಸ್ಥಾನ್ ಮೂಲದ ಸಮುದಾಯಗಳು ಕೆಜಿಎಫ್ ಮತ್ತು ಕೋಲಾರ ಜಿಲ್ಲಾ ಸುತ್ತಮುತ್ತಲಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಲೆ ಮೇಲೆ ಕಳಶವನ್ನಿಟಿಟಕೊಂಡು ನೃತ್ಯವನ್ನು ಮಾಡಿ ಶ್ರೀ ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಮೇಶ್ಚಂದ್ ಸೇನ್, ರಮೇಶ್ಶರ್ಮಾ, ಸೋಹನ್ಲಾಲ್ ಶರ್ಮಾ, ಶಂಕರ್ಲಾಲ್ಶರ್ಮಾ, ಗೌತಮ್ಸೇನ್, ರತನ್ಲಾಲ್ ಶರ್ಮಾ, ಸುದರ್ಶನ್ ಹಾಜರಿದ್ದರು.