ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿಕಲಚೇತನರು

Srinivasa Murthy VN
Updated On : 15 Oct 2013, 1:32 am

ಕೋಲಾರ: ವಿಕಲಚೇತನರ ಸಾಮರ್ಥ್ಯ ಗುರುತಿಸಿ ಅವಕಾಶ ನೀಡಿದಲ್ಲಿ ಸಾಮಾನ್ಯ ಜನರಂತೆ ಇವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬಲ್ಲರು ಎಂದು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಸ್ವಾಮಿ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಹಾಗೂ ಕೋಲಾರ ನವಚೇತನ ಅರ್ಥೋಪಿಟಿಕ್ ಸೇವಾ ಸಂಸ್ಥೆ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರೇಷ್ಠ ಉದ್ದೇಶಕ್ಕಾಗಿ ಓಟ 2013 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ರೋಟರಿ ಕ್ಲಬ್ ಕೋಲಾರ ಅಧ್ಯಕ್ಷ ಗೋಪಾಲರೆಡ್ಡಿ, ಪತ್ರಕರ್ತ ಸಂಘದ ಕಾರ್ಯದರ್ಶಿ ಕೆ.ಎಸ್.ಗಣೇಶ್, ಆರಕ್ಷಕ ವತ್ತ ನಿರೀಕ್ಷಕ ರಮೇಶ್, ಕುರುಬರ ಹೋರಾಟ ವೇದಿಕೆಯ ಅಧ್ಯಕ್ಷ ತ್ಯಾಗರಾಜ್ ಮುದ್ದಪ್ಪ ಅಂಗವಿಕಲರ ಸಾಧನೆ ಬಗ್ಗೆ ಪ್ರಶಂಸಿದರು. ಅಧ್ಯಕ್ಷತೆ ವಹಿಸಿದ್ದ ಲೆಕ್ಕ ಪರಿಶೋಧಕ ಬಿ.ವಿ. ನಾರಾಯಣ್ ವಿಕಲಚೇತನ ಮಕ್ಕಳಿಗೆ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸರ್ಕಾರ ಮತ್ತು ಸಮಾಜ ಹೆಚ್ಚಿನ ಸಹಾಯ ನೀಡಬೇಕೆಂದು ತಿಳಿಸಿದರು. ವಿಕಲಚೇತನರ ಗಾಳಿ ಕುರ್ಚಿಓಟ, ಮ್ಯಾರತಾನ್ ಓಟ, ಸ್ಲೋ ಸೈಕಲ್ ಸ್ಪರ್ಧೆ, ರಂಗೋಳಿ ಸ್ಪರ್ಧೆ ಹಾಗೂ ವಿಕಲ ಚೇತನರ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ಸಮಾರಂಭದಲ್ಲಿ ವಿತರಿಸಲಾಯಿತು.  10 ವಿಕಲ ಚೇತನರಿಗೆ ಉಪಯುಕ್ತ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಅಂತರಗಂಗೆ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶಂಕರ್ ಸ್ವಾಗತಿಸಿ, ಕೆಂಬೋಡಿ ಮಂಜುನಾಥ ನಿರೂಪಿಸಿ, ಮಂಜುನಾಥ ಪಮ್ಮಾರ್ ವಂದಿಸಿದರು. ಅಂತರಗಂಗಾ ಸಂಸ್ಥೆಯ ಮುಖ್ಯೋಪಾಧ್ಯಾಯ ಶಂಕರ್ ಇದ್ದರು.
ವಿಜೇತರ ಪಟ್ಟಿ: ವಿಕಲಚೇತನರ ಗಾಳಿಕುರ್ಚಿ ಓಟ: ಚನ್ನಕೃಷ್ಣ -ಪ್ರಥಮ, ಎಸ್.ಬಿ. ನಾಗೇಶ್ ದ್ವಿತೀಯ, ನಾಗೇಶ್ ತೃತೀಯ ಸ್ಥಾನ.
ತ್ರಿಚಕ್ರ ಸೈಕಲ್ ಸ್ಪರ್ಧೆ: ಚಿಕ್ಕವೆಂಕಟಪ್ಪ-ಪ್ರಥಮ, ಬಿಲ್ಕ್ಲಿಂಟನ್ ದ್ವಿತೀಯ, ಮುನಿಕಾಕಪ್ಪ-ತೃತೀಯ.
ಮ್ಯಾರಥಾನ್ ಓಟ ಸ್ಪರ್ಧೆ ಸುಜಿತ್ಕುಮಾರ್ ಪ್ರಥಮ, ಪ್ರದೀಪ್ ಕುಮಾರ್ ದ್ವಿತೀಯ, ಡಿ.ಕೆ. ನವೀನ್ ಕುಮಾರ್ ತೃತೀಯ.
ಸ್ಲೋ ಸೈಕಲ್ ಸ್ಪರ್ಧೆ: ಪ್ರದೀಪ್ ಕುಮಾರ್ ಪ್ರಥಮ, ಜಿ. ಪ್ರವೀಣ್ ಕುಮಾರ್ -ದ್ವಿತೀಯ, ಆರ್. ಮಂಜುನಾಥ್ ತೃತೀಯ.
ರಂಗೋಲಿ ಸ್ಪರ್ಧೆ: ಎಸ್. ಪದ್ಮಮ್ಮ -ಪ್ರಥಮ, ಕೆ.ಎಸ್. ಮುನಿರತ್ನಮ್ಮ- ದ್ವಿತೀಯ, ಕೆ.ಮಂಜುಳ- ತೃತೀಯ.
ವಿಕಲಚೇತನರ ಸಾಂಸ್ಕೃತಿಕ ಸ್ಪರ್ಧೆ: ಆದಿ ಅಂತರಗಂಗಾ ಸಂಸ್ಥೆ-ಪ್ರಥಮ, ಚನ್ನಕೃಷ್ಣ ಮತ್ತು ತಂಡ-ದ್ವಿತೀಯ ,ನಾಗೇಶ್ ಎನ್.ಸಿ.ಓ- ತೃತೀಯ ಸ್ಥಾನ ಗಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement