ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಶದ ಸುಭ್ರತೆಗಾಗಿ ಮೋದಿ ಪ್ರಧಾನಿಯಾಗಬೇಕು

Srinivasa Murthy VN
Updated On : 16 Oct 2013, 12:27 pm

ಕೋಲಾರ: ದೇಶದ ರಕ್ಷಣೆಗಾಗಿ ಮತ್ತು ಉತ್ತಮ ಆಡಳಿತಕ್ಕಾಗಿ ಈ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಲು ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಕೃಷ್ಣಾರೆಡ್ಡಿ ತಿಳಿಸಿದರು.
ನಗರದಲ್ಲಿ ವಿಜಯದಶಮಿ ದಿನ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯಕ್ರಮಗಳಿಗೆ ಕಟ್ಟಡವನ್ನು ಉಚಿತವಾಗಿ ಪಕ್ಷದ ನಗರ ಘಟಕದ ಅಧ್ಯಕ್ಷ ಜಯಂತಿ ಲಾಲ್ ನೀಡಿದ್ದಾರೆ. ಈ ಕಟ್ಟಡವನ್ನು ಸದುಪಯೋಗ ಮಾಡಿಕೊಂಡು ಸಂಘಟನೆಗಾಗಿ ಪ್ರತಿಯೊಬ್ಬರು ಶ್ರಮಿಸೋಣವೆಂದು ಕರೆ ನೀಡಿದರು.
ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ವಿಜಯದಶಮಿ ದಿನ ಬಿಜೆಪಿ ಕಚೇರಿ ಆರಂಭಿಸಲಾಗಿದ್ದು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ವಿಜಯ ಸಿಗುವುದರಲ್ಲಿ ಅನುಮಾನವಿಲ್ಲವೆಂದರು.
 ಪಕ್ಷಕ್ಕಾಗಿ ದುಡಿದ ಶ್ಯಾಮ್ ಪ್ರಕಾಶ್ ಮುಖರ್ಜಿ, ದೀನ್ ದಯಾಳ್ ಉಪಾದ್ಯಾಯ, ಅಟಲ್ ಬಿಹಾರಿ ವಾಜಪೇಯಿಯವರ ಅದರ್ಶಗಳನ್ನು ಮೈಗೂಡಿಸಿಕೊಂಡು, ಸ್ವಾಮಿ ವಿವೇಕಾನಂದರಂತೆ ರಾಷ್ಟ್ರಪ್ರೇಮವನ್ನು ಅಳವಡಿಸಿಕೊಂಡು ಉತ್ತಮ ನಾಯಕರಾಗಿ ಬೆಳೆಯಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಜೆ.ಎಸ್. ಪಾರ್ಥಸಾರಥಿಯವರ ಮಾರ್ಗದರ್ಶನದೊಂದಿಗೆ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು ಪಣ ತೊಡಬೇಕೆಂದು ತಿಳಿಸಿದರು.
ನಗರಾಧ್ಯಕ್ಷ ಜಯಂತಿಲಾಲ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಯದರು. ಗ್ರಾಮಾಂತರ ಅಧ್ಯಕ್ಷ ಚನ್ನಾಪುರ ನಾರಾಯಣಸ್ವಾಮಿ, ಪಿ.ಎಸ್. ಸತ್ಯನಾರಾಯಣ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹರಾಜು, ಜಿಪಂ ಸದಸ್ಯರ ಎಂ.ಎಸ್. ಆನಂದ್, ಜಿಲ್ಲಾ ಖಜಾಂಚಿ ಡಿ.ಆರ್. ನಾಗರಾಜ್, ಉಪಾಧ್ಯಕ್ಷರಾದ  ಗಾಂದಿನಗರ ವೆಂಕಟೇಶ್, ಹೂಹಳ್ಳಿ ಚಲಪತಿ, ಕಾರ್ಯದರ್ಶಿಗಳಾದ ವಿಜಯಕುಮಾರ್, ಮು. ರಾಘವೇಂದ್ರ, ರಾಜ್ಯ ಯುವ ಮೋರ್ಚ್ಚಾ ಕಾರ್ಯದರ್ಶಿ ಓಂ ಶಕ್ತಿ ಚಲಪತಿ, ನೀಲಿ ಜಯಶಂಕರ್, ತಿಮ್ಮ್ಮರಾಯಪ್ಪ, ಸಾ.ಮಾ.ಅನಿಲ್ ಬ್ಬಾಬು, ಪ್ರಮೋದ್, ಅಲ್ಲಿಕುಂಟೆ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement