ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
ಶಿಡ್ಲಘಟ್ಟ: ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ(ಸಿ.ಐ.ಟಿ.ಯು) ಶಿಡ್ಲಘಟ್ಟ ತಾಲೂಕು ಸಮಿತಿಯಿಂದ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿತ್ತು. ಆಶಾ ಕಾರ್ಯಕರ್ತೆಯರು ಕೆಲಸ ಪ್ರಾರಂಬ ಮಾಡಿ 4 ವರ್ಷಗಳಾದರೊ ರು. 2000 ಪ್ರೋತ್ಸಾಹ ದನ ತೆಗೆದುಕೊಳ್ಳಲು ಸಾಧ್ಯವಾಗದೆ ಸಂಕಷ್ಟದ ಬದುಕನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮಾಸಿಕ ವೇತನ ನೀಡದೆ ಬರೀ ಗೌರವ ಧನಕ್ಕೆ ಸೀಮಿತ ಪಡಿಸಿದ್ದು ಹೊರ ರಾಜ್ಯಗಳ ಮಾದರಿಯಲ್ಲಿ ಮಾಸಿಕ ವೇತನ ನೀಡಬೇಕೆಂದು ಒತ್ತಾಯಿಸಿದರು. ತಿಂಗಳ ಸರಿಯಾಗಿ ಪ್ರೋತ್ಸಾಹ ದನ ನೀಡಬೇಕು, ಕನಿಷ್ಠ ರು. 6000 ಮಾಸಿಕ ವೇತನ ನೀಡಬೇಕು, ಕುಡಿಯುವ ನೀರು, ಊಟದ ವ್ಯವಸ್ಥೆ ಒದಗಿಸಿಕೊಡಬೇಕೆಂದು ಪ್ರತಿಭಟಿಸಿದರು. ಕಲಾವತಿ.ಕೆ.ವಿ, ವನಜಾಕ್ಷಿ, ಅನುಸೊಯಮ್ಮ, ಮಂಜುಳ, ರತ್ನ ಕುಮಾರಿ, ಕುಂದಲಗುರ್ಕಿ ಮುನೀಂದ್ರ ಹಾಜರಿದ್ದರು.
ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಗೌರಿಬಿದನೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ತಾಲೂಕು ಆರೋಗ್ಯಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ಮಾತನಾಡಿ, ಸರ್ಕಾರ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆರಂಭಿಸಿ ಗ್ರಾಮೀಣ ಪ್ರದೇಶದ ಬಡವರ ಅವಶ್ಯಕತೆಗಳನ್ನು ಪೂರೈಸಲು ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸಹಾಯಕರನ್ನು ನೇಮಕ ಮಾಡಲಾಗಿದ್ದು, ಮಹಿಳಾ ಸಹಾಯಕರಿಗೆ ಹೆಚ್ಚಿನ ಕೆಲಸದ ಒತ್ತಡವಾಗಿರುವುದರಿಂದ ಆಶಾಕಾರ್ಯ ಕರ್ತರನ್ನು ನೇಮಕ ಮಾಡಲಾಗಿದೆ ಆದರೆ ಇವರಿಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಹಗಲಿರುಳು ದುಡಿಯುತ್ತಿದ್ದು, ಕನಿಷ್ಠ ವೇತನ ಜಾರಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಬೇಡಿಕೆಗಳು: ತಿಂಗಳಿಗೆ ರು. 10,000 ವೇತನ ನಿಗದಿ ಮಾಡಬೇಕು, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಪ್ರೋತ್ಸಾಹ ಧನ ವಿತರಣೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷೆ ಸರಸ್ವತಮ್ಮ, ಕಾರ್ಯದರ್ಶಿ ಮಂಜುಳಾ, ಸದಸ್ಯರಾದ ಕೃಷ್ಣವೇಣಿ, ಸಾವಿತ್ರಮ್ಮ, ರವಿಚಂದ್ರರೆಡ್ಡಿ ಪಾಲ್ಗೊಂಡಿದ್ದರು.