ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮಸ್ಥರಿಗೆ ಕಸದ ಕಿರಿಕಿರಿ

Srinivasa Murthy VN
Updated On : 18 Oct 2013, 12:36 pm

ಬಂಗಾರಪೇಟೆ: ಪಟ್ಟಣದಿಂದ ಸಂಗ್ರಹಿಸುವ ತ್ಯಾಜ್ಯವನ್ನು ಪುರಸಭೆ ಜಮೀನಿನೊಳಗೆ ಹೂತಿಹಾಕದೆ ಮೇಲ್ಬಾಗದಲ್ಲೆ ಬಿಸಾಡಿರುವುದರಿಂದ ದುರ್ವಾಸನೆ ಬ್ಯಾಡಬೆಲೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕಿರಿಕಿರು ಉಂಟಾಗುತ್ತಿದೆ ಇದನ್ನು ಸರಿಪಡಿಸದಿದ್ದರೆ ಪುರಸಭೆ ಕಚೇರಿ ಮುಂದೆ ಕಸ ಹಾಕುವ ಮೂಲಕ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಗೆ ನೀಡಿದ್ದಾರೆ.
ಪ್ರತಿದಿನ ಪಟ್ಟಣದ ಎಲ್ಲಾ ವಾರ್ಡುಗಳಿಂದ ಸಂಗ್ರಹಿಸುವ ಗಣ ತ್ಯಾಜ್ಯ ವಸ್ತುಗಳನ್ನು ಪಟ್ಟಣದ ಹೊರವಲಯದ ಬ್ಯಾಡಬೆಲೆ ಗ್ರಾಮದ ಬಳಿ ನಾಲ್ಕು ಎಕರೆ ಪ್ರದೇಶವನ್ನು ಪುರಸಭೆ ಖರೀದಿಸಿ ಅದರಲ್ಲಿ ಹಾಕುತ್ತಿದೆ. ಕಸವನ್ನು ಸುಡಬೇಕು ಆದರೆ ಪುರಸಭೆ ಸಿಬ್ಬಂದಿ ಇದ್ಯಾವುದನ್ನು ಪಾಲಿಸದೆ ಜಮೀನಿನಲ್ಲಿ ಬಿಸಾಡಿ ಬರುತ್ತಿರುವುದರಿಂದ ಈ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ದುರ್ವಾಸನೆ ಒಂದೆಡೆಯಾದರೆ ಮತ್ತೊಂದೆಡೆ ಇದರಿಂದ ಸೃಷ್ಟಿಯಾಗಿರುವ ನೊಣಗಳ ಕಾಟ ಮಿತಿ ಮೀರಿದೆ. ಪುರಸಭೆ ಕಸವನ್ನು ನಿಮಯ ಬದ್ದವಾಗಿ ಮಾಡದೆ ಬೇಕಾಬಿಟ್ಟಿ ಹಾಕುತ್ತಿರುವುದರಿಂದ ಕಸ ಗಾಳಿಗೆ ಗ್ರಾಮದ ಕಡೆ ಬರುವ ಮೂಲಕ ಗ್ರಾಮಸ್ಥರ ನಿದ್ದೆ ಕೆಡೆಸಿದೆ. ಈ ಬಗ್ಗೆ ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ತಲೆಗೆ ಹಾಕಿಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮಾಂಸದ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿಸಾಡಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೂ ಹಾಗೂ ಅಕ್ಕಪಕ್ಕದ ತೋಟಗಳ ಮಾಲೀಕರಿಗೂ ತೊಂದರೆಯಾಗಿದೆ. ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್  ಮಾತನಾಡಿ, ಪುರಸಭೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದಿದ್ದರೆ ಕಸವನ್ನು ಪುರಸಭೆ ಕಚೇರಿ ಮುಂದೆ ಸುರಿದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕನಸಾಗೇ ಉಳಿದ ಸೂರಿನ ಕನಸು
ಟೇಕಲ್: ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರಗಳು ಏನೆಲ್ಲಾ ಪ್ರಯತ್ನ ಮಾಡಿದರು ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಗುಡಿಸಲಿನಲ್ಲೆ ಜನ ವಾಸವಾಗಿರುವುದು ದುರಾದೃಷ್ಟಕರ.
ಆಶ್ರಯ, ಅಂಬೇಡ್ಕರ್, ಬಸವ ಇಂದಿರಾ ಆವಾಜ್, ರಾಜೀವ್ ಗಾಂಧಿ ವಸತಿ ಯೋಜನೆಗಳಿದ್ದರೂ ಪ್ರಯೋಜನವಿಲ್ಲವಾಗಿದೆ. ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ತಿಮ್ಮನಾಯಕನಹಳ್ಳಿಯಲ್ಲಿ 8 ರಿಂದ 10, ಮಾಸ್ತಿ ಸುತ್ತಮುತ್ತ 5 ರಿಂದ 8, ಕೊಂಡಶೆಟ್ಟಹಳ್ಳಿ, ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲಲ್ಲಿಯೇ ವಾಸವಾಗಿರುವುದು ಜೀವಂತ ಸಾಕ್ಷಿಯಾಗಿದೆ.
ಬೇಕಿದೆ ಸವಲತ್ತು: ಗ್ರಾಮಗಳು ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಈ ಗುಡಿಸಲುಗಳು ಕಾಣಸಿಲ್ಲ. ತಾಲೂಕಿನ 28 ಗ್ರಾಪಂಗಳಿಗೆ ಪ್ರತಿ ವರ್ಷ ಲಕ್ಷಾಂತರ ರು.ಬಿಡುಗಡೆಯಾಗುತ್ತಿದ್ದು ಕೆಲ ಪಂಚಾಯ್ತಿಗಳಲ್ಲಿ ರಾಜಕೀಯ ದುರುದ್ದೇಶದಿಂದ ಅರ್ಹ ಫಲಾನುಭವಿಗಳಿಗೆ ಸೇರಬೇಕಾದ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ ಎಂಬುವುದು ಜನತೆಯ ಅಳಲಾಗಿದೆ.
ಹಿಂದೆ ಸಚಿವರಾಗಿದ್ದ ಎಸ್.ಎನ್. ಕೃಷ್ಣಯ್ಯಶೆಟ್ಟರು ತಮ್ಮ 9 ವರ್ಷಗಳ ಆಡಳಿತಾವಧಿಯಲ್ಲಿ ಗುಡಿಸಲು ಮುಕ್ತ ತಾಲೂಕನ್ನು ಮಾಡುವುದಾಗಿ ಹೇಳಿದ್ದರು. ಆದರೆ ಅದು ಆಶ್ವಾಸನೆಯಾಗಿಯೇ ಉಳಿಯಿತು. ಪ್ರಸ್ಥುತ ಶಾಸಕ ಕೆ.ಎಸ್. ಮಂಜುನಾಥಗೌಡರು ಸೂರು ನೀಡುತ್ತಾರೆಂಬ ಆಶಾಭಾವನೆಯಲ್ಲಿದ್ದಾರೆ ತಾಲೂಕಿನ ಜನತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement