ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೈಕ್, ಚಿನ್ನಾಭರಣ ಕಳ್ಳರ ಸೆರೆ

Srinivasa Murthy VN
Updated On : 18 Oct 2013, 12:36 pm

ಚಿಂತಾಮಣಿ: ತಾಲೂಕಿನ ವಿವಿಧ ವ್ಯಾಪ್ತಿಯಲ್ಲಿ ನಡೆದ ಬೈಕ್, ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದರ ಜತೆಗೆ ಪಟ್ಟಣದ ಮುರಗಮಲ್ಲ ರಸ್ತೆಯೊಂದರ ಗೋಡೌನ್ ಒಂದರ ಮೇಲೆ ದಾಳಿ ನಡೆಸಿ 12 ದ್ವಿಚಕ್ರವಾಹನಗಳನ್ನು ಹಾಗೂ 75 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೆಂಕಟೇಶ್, ಗೋಪಾಲ ಮತ್ತು ನವೀನ್ ಬಂಧಿತ ಆರೋಪಿಗಳು. ಗುರುವಾರ ಮುರಗಮಲ್ಲ ರಸ್ತೆಯ ಗೋಡೌನ್ ಒಂದರಲ್ಲಿ ಬಂಧಿತರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಪಟ್ಟಣದ ವೃತ್ತ ನಿರೀಕ್ಷಕ ನಂಜಪ್ಪ, ಆರೋಪಿಗಳನ್ನು ದಸ್ತಗಿರಿ ಮಾಡಿದ ವಿಚಾರಿಸಿದ್ದಾರೆ. ಆಗ ಆರೋಪಿಗಳು ತಾವು ಮಾಡುತ್ತಿದ್ದ ಬೈಕ್ ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ನಂತರ ಇವರು ನೀಡಿದ ಮಾಹಿತಿ ಆಧಾರದ ಮೇಲಿಂದ ಮುರಗಮಲ್ಲ ಗೋಡೌನ್‌ಗೆ ಭೇಟಿ ನೀಡಿ ಅಲ್ಲಿದ್ದ 12 ಬೈಕ್ ಹಾಗೂ 75 ಗ್ರಾಂ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದಲ್ಲಿ ನಡೆಯುತ್ತಿದ್ದ ಬೈಕ್ ಕಳ್ಳತನ ಹಾಗೂ ಸರಗಳ್ಳತನ ಬಗ್ಗೆ ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸಣ್ಣತಿಮ್ಮಪ್ಪ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಂತೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ತಾಲೂಕಿನ ಹಾಗೂ ಪಟ್ಟಣದಲ್ಲಿ ದಿನೇ-ದಿನೇ ಹೆಚ್ಚುತ್ತಿರುವ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಗೆ ನೆಮ್ಮದಿ ತಂದತಾಗಿದೆ. ಸಿಬ್ಬಂದಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಬಸವರಾಜು ಹಾಗೂ ಕ್ರೈಂ ಸಿಬ್ಬಂದಿ ಚನ್ನಕೇಶವಗೌಡ, ನರಸಿಂಹಮೂರ್ತಿ, ದೇವರಾಜ್, ರವೀಂದ್ರ, ಸತೀಶ್, ಸರ್ವೆಶ್, ಕೃಷ್ಣಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement