ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಂಜುನಾಥರೆಡ್ಡಿ ಎಬಿವಿಪಿ ಉಪಾಧ್ಯಕ್ಷ

Srinivasa Murthy VN
Updated On : 18 Oct 2013, 12:38 pm

ಚಿಂತಾಮಣಿ: ಚಿಂತಾಮಣಿ ಪಟ್ಟಣದ ಟ್ಯಾಂಕ್ ಬಾಂಡ್ ರಸ್ತೆ ನಿವಾಸಿ ಮಂಜುನಾಥರೆಡ್ಡಿ ಬೆಂಗಳೂರು ವಿಶ್ವವಿದ್ಯಾಲಯದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ 7 ವರ್ಷಗಳಿಂದ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರಾಗಿ, ಚಿಂತಾಮಣಿ ತಾಲೂಕು ಸಂಚಾಲಕರಾಗಿ ಕೋಲಾರ ಜಿಲ್ಲಾ ಸಹ ಸಂಚಾಲಕರಾಗಿ, ರಾಜ್ಯ ಸಹ ಕಾರ್ಯದರ್ಶಿಯಾಗಿ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಮಂಜುನಾಥರೆಡ್ಡಿ ಅವರನ್ನು ಅ.15 ರಂದು ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ನಾಯಕರ ಸಭೆಯಲ್ಲಿ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ಎಬಿವಿಪಿ ಉಪಾಧ್ಯಕ್ಷರನ್ನಾಗಿ ಘೋಷಿಸಿದ್ದಾರೆ ಎಂದು ಚಿಂತಾಮಣಿ ತಾಲೂಕು ಘಟಕ ತಿಳಿಸಿದೆ.

ಪರಭಾಷಾ ನಾಮಫಲಕ ವಿರೋಧಿಸಿ ಮನವಿ
ಬಾಗೇಪಲ್ಲಿ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿನ ಹೆಸರುಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿರಬೇಕು. ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಹರೀಶ್, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ ನೀಡದೆ ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳಿಗೆ ಆದ್ಯತೆ ನೀಡುತ್ತಿರುವುದು ದುರಾದೃಷ್ಟಕರ. ಕನ್ನಡ ಭಾಷೆಯನ್ನು ನಿರ್ಲಕ್ಷ್ಯಿಸುವ ನಾಮಫಲಕಗಳನ್ನು ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ಕಚೇರಿ ಮತ್ತು ಅಂಗಡಿ ಮಾಲೀಕರು ಕನ್ನಡ ವಿರೋಧಿ ನಾಮಫಲಕಗಳನ್ನು ಹಾಕಿದರೆ 10 ಸಾವಿರ ರು.ಗಳ ದಂಡ ವಿಧಿಸಿ ಕ್ರಮ ಜರುಗಿಸಲು ಅವಕಾಶವಿದೆ. ಆದರೂ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದ ಅವರು, ನ. 1 ರೊಳಗೆ ಇಂಗ್ಲಿಷ್ ನಾಮಫಲಕಗಳನ್ನು ಬದಲಿಸದ ಪಕ್ಷದಲ್ಲಿ ಅಂತಹ ನಾಮಫಲಕಗಳಿಗೆ ಕರವೇ ಮಸಿ ಬಳೆಯುವ ಕೆಲಸ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ ಎಂ.ಎ. ಪಧ್ಮರವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರವೇ ತಾಲೂಕು ಗೌರವಾಧ್ಯಕ್ಷ ಜಿ.ಎಸ್. ರಾಮಿರೆಡ್ಡಿ, ಮಹಿಳಾಧ್ಯಕ್ಷೆ ನಾಗಮಣಿ, ಪ್ರಧಾನ ಕಾರ್ಯದರ್ಶಿ ಶಿವಶಂಕರ್, ಉಪಾಧ್ಯಕ್ಷ ಸುರೇಶ್, ತಾ.ಸಂ.ಕಾರ್ಯದರ್ಶಿ ಸೋಮಶೇಖರ್, ಸಂಚಾಲಕ ವೆಂಕಟೇಶ್, ಕೈಗಾಡಿ ಕೆ.ಶ್ರೀನಿವಾಸ್, ಜಿ. ಮದ್ದೇಪಲ್ಲಿ ಬಾಬು, ಪದವಿ ವಿದ್ಯಾರ್ಥಿ ಘಟಕದ ಅಮರನಾಥ್, ಬಾಲಚಂದ್ರ, ಚೇತನ್, ಅರ್ಪತ್ ಭಾಗವಹಿಸಿದ್ದರು.

ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ: ಶಾಸಕಿ ವೈ. ರಾಮಕ್ಕ
ಕೆಜಿಎಫ್: ಕ್ಷೇತ್ರದ ಜನರ ಮತದಿಂದ ಶಾಸಕಿಯಾಗಿದ್ದು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಂಕಷ್ಟಗಳಿಗೆ ಪ್ರಮುಖ ಆದ್ಯತೆ ನೀಡುವುದಾಗಿ ಶಾಸಕಿ ವೈ. ರಾಮಕ್ಕ ಹೇಳಿದರು.
ನಗರದ ಹೆನ್ರೀಸ್ ಬಡಾವಣೆಯಲ್ಲಿ ನಗರೋತ್ತಾನ ಯೋಜನೆಯಡಿ ರು. 3.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮಾಜಿ ಶಾಸಕರು ನಿಂದಿಸಿರುವುದನ್ನು ಖಂಡಿಸಿದರು.ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶ ಮತ್ತು ನಗರ ಭಾಗದ 35 ನಗರಸಭಾ ವಾರ್ಡ್‌ಗಳಲ್ಲಿ ರಸ್ತೆ, ರಾಜಕಾಲುವೆ, ಚರಂಡಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ರು. 16 ಕೋಟಿ ವೆಚ್ಚದಲ್ಲಿ ನಗರೋತ್ತಾನ ಯೋಜನೆಯ ಕಾಮಗಾರಿ ಆರಂಭವಾಗಿದೆ ಎಂದರು.
ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿದರು.
ನಗರಸಭಾ ಸದಸ್ಯರಾದ ವಿಜಯಕುಮಾರ್, ಅಶೋಕ್, ರವಿಕುಮಾರ್, ನಟರಾಜ್, ಬಾಟಾ ಗೋಪಾಲ್, ನೈನಾರವಿ, ಯಶ್ವಂತರಾಜ್, ಸುಮಾನಾಗರಾಜ್, ಮುನಿಸ್ವಾಮಿರೆಡ್ಡಿ, ರಾಮಕೃಷ್ಣರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement