ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

21 ದಿನಗಳ ಗುರು ನಮಸ್ಕಾರ ಕಾರ್ಯಕ್ರಮ

Srinivasa Murthy VN
Updated On : 20 Oct 2013, 12:43 pm

ಚಿಕ್ಕಬಳ್ಳಾಪುರ: ಪತಂಜಲಿ ಯೋಗ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದ ಹೊರ ವಲಯದ ಆದಿಚುಂಚನಗಿರಿ ಮಠದ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 21 ದಿನಗಳ ಗುರು ನಮಸ್ಕಾರ ಕಾರ್ಯಕ್ರಮ ನಡೆಯಿತು.
ಕಳೆದ 21 ದಿನಗಳಿಂದ ಶಾಸ್ತ್ರೋಕ್ತವಾಗಿ ಮಂತ್ರ ಸಹಿತ 108 ಗುರು ನಮಸ್ಕಾರಗಳನ್ನು ಮಾಡಲಾಗುತ್ತಿದೆ. ಇದು ಮಾನಸಿಕ, ಆಧ್ಯಾತ್ಮಿಕ ಮತ್ತು ಶಾರೀರಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ.ಅಲ್ಲದೇ ಈ ಮೂಲಕ ಜನರಲ್ಲಿ ಯೋಗದ ಅರಿವನ್ನು ಮೂಡಿಸಲಾಗಿದೆ ಎಂದು ಯೋಗ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಕೀಲ ಪಿ.ವಿ. ರಾಮಚಂದ್ರರೆಡ್ಡಿ ತಿಳಿಸಿದರು. ಕಳೆದ 4 ವರ್ಷಗಳಿಂದ ಗುರು ನಮಸ್ಕಾರ ವಿಧಿಯನ್ನು ನವರಾತ್ರಿ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಬಾಬರಾಮದೇವ್ ಅವರ ಮಾರ್ಗದರ್ಶನದಂತೆ ಈ ಗುರುನಮಸ್ಕಾರ ವಿಧಿಯನ್ನು ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದೆ ಎಂದು ಯೋಗ ಸಮಿತಿಯ ಜಿಲ್ಲಾ ಘಟಕದ ಕಾರ್ಯದರ್ಶಿ ಲಕ್ಷ್ಮಣಮೂರ್ತಿ ತಿಳಿಸಿದರು. ಆದಿಚುಂಚನಗಿರಿ ಶಾಖಾ ಮಠದ ಸಿದ್ದೇಶ್ವರ ಸ್ವಾಮೀಜಿ, ಪತಂಜಲಿ ಯೋಗ ಸಮಿತಿಯ ಮಹಿಳಾ ಪ್ರಭಾರಿ ಕೆ. ವೀಣಾ, ರಂಗಪ್ಪ, ಶಿವಣ್ಣ, ಪ್ರಸನ್ನ, ರಾಮಮೂರ್ತಿ, ಆಸ್ಪತ್ರೆ ಸೀನಪ್ಪ, ಶ್ರೀಧರ್, ಮಾಗಡಯ್ಯ, ರತ್ನವರ್ಮ, ಎನ್. ಲೋಕನಾಥ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement