ಕೇಂದ್ರದ ವಿರುದ್ಧ ಕರಪತ್ರ ಹಂಚಿದ ಬಿಜೆಪಿ
ಶಿಡ್ಲಘಟ್ಟ: ಬಿಜೆಪಿ ಅಧಿಕಾರವಧಿಯಲ್ಲಿನ ಸಾಧನೆಗಳನ್ನು ಹೊತ್ತ ಕರಪತ್ರಗಳನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹಂಚುವ ಮೂಲಕ ಅಭಿಯಾನ ಆರಂಭಿಸಿದರು.
ಕಾಂಗ್ರೆಸ್ ಅನ್ನು ತೊಲಗಿಸಿ ದೇಶ ಉಳಿಸಿ ಎಂಬ ಶಿರ್ಷಿಕೆಯಡಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಪಕ್ಷದ ಸಾಧನೆಗಳಿರುವ ಹಾಗೂ ಆಡಳಿತ ಪಕ್ಷಗಳ ಹಗರಣಗಳನ್ನು ತಿಳಿಸುವ ಕರಪತ್ರಗಳನ್ನು ಹಂಚುವ ಮೂಲಕ ಅಭಿಯಾನ ಆರಂಭಿಸಿದರು. ಇದಕ್ಕೆ ತಾಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರ ಗೌಡರ ಸ್ವಗ್ರಾಮವಾದ ಕಂಬದಹಳ್ಳಿಯಿಂದ ಪ್ರಾರಂಭ ಮಾಡಲಾಯಿತು. ವಾರಕ್ಕೊಮ್ಮೆ ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿ ನೀಡಿ ಜಾಗೃತಿ ಹಮ್ಮಿಕೊಳ್ಳಬೇಕು. ಮುಂದೆ ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ಪ್ರಚಾರ ಕೈಗೊಂಡಿರುವುದಾಗಿ ತಿಳಿಸಿದರು. ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿಯವರು ಮುಂದೆ ಪ್ರಧಾನಿಯಾಗುವುದು ಖಚಿತ. ಅವರ ನೇತೃತ್ವದ ಬಿಜೆಪಿ ಸರ್ಕಾರ ಮುಂದೆ ಬರುವ ಚುನಾವಣೆಗಳಲ್ಲಿ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದೆ ಎಂದರು. ಕೇಂದ್ರ ಕೈಗಾರಿಕಾ ಸಚಿವ ಕೆ.ಎಚ್. ಮುನಿಯಪ್ಪನವರ ಸ್ವ ಗ್ರಾಮವಾದ ಕಂಬದಹಳ್ಳಿಯಿಂದಲೇ ಪ್ರಚಾರ ಕಾರ್ಯ ಪ್ರಾರಂಭ ಮಾಡಿರುವುದು ವಿಶೇಷವಾಗಿತ್ತು. ಕಂಬದಹಳ್ಳಿ ಸುರೇಂದ್ರಗೌಡ, ಸದಾಶಿವ, ದಾಮೋದರ್, ಶ್ರೀಧರ್, ರಘು, ರವಿ, ಸುಜಾತಮ್ಮ, ರತ್ನಮ್ಮ, ಶಿವಮ್ಮ, ಸತೀಶ್, ದ್ಯಾವಪ್ಪ, ಅಶ್ವತ್, ನರೇಶ್ ಇದ್ದರು.