ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ವಿರೋಧ

Srinivasa Murthy VN
Updated On : 20 Oct 2013, 12:44 pm

ಮಾಲೂರು; ತ್ಯಾಜ್ಯ ನಿರ್ವಹಣೆ ಘಟಕವನ್ನು ಪಿಚ್ಚಗುಂಟ್ರಹಳ್ಳಿಯಲ್ಲಿ ಸ್ಥಾಪಿಸಲು ಅವಕಾಶ ನೀಡಬಾರದು ಎಂದು ನೂಸಗರೆ ಪಂಚಾಯ್ತಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದೆ.
ನೂಸಗೆರೆ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು ಅಧ್ಯಕ್ಷತೆಯಲ್ಲಿ ಈ ಸಂಬಂಧ ಶನಿವಾರ ನಡೆದ ಪಂಚಾಯ್ತಿ ಸದಸ್ಯರ ಸಭೆಯಲ್ಲಿ ಪಂಚಾಯ್ತಿಯ ಎಲ್ಲ 16 ಸದಸ್ಯರು ಒಕ್ಕೂರುಲಿನಿಂದ ಪಂಚಾಯ್ತಿ ವ್ಯಾಪ್ತಿಯ  ಪಿಚ್ಚಗುಂಟ್ರಹಳ್ಳಿ ಹಾಗೂ ಮಾದನಹಟ್ಟಿಯಲ್ಲಿ 35 ಎಕರೆ ಪ್ರದೇಶದಲ್ಲಿ ಎಸ್‌ಎಮ್‌ಎಸ್ ಇನ್‌ಫ್ರಸ್ಟ್ರಕ್ಚರ್ ಲಿಮೆಟೆಡ್ 221.69 ಕೋಟಿ ರು.ಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ವಸ್ತುಗಳ ನಿರ್ವಹಣೆ ಮಾಡುವ ಘಟಕಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಡಬಾರದೆಂದು ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ತ್ಯಾಜ್ಯ ವಸ್ತುಗಳನ್ನು ಶೇಖರಣೆ ಮಾಡುವುದರಿಂದ, ಸುಟ್ಟಬೂದಿಯನ್ನು ಭೂಮಿಯಲ್ಲಿ ಹೊಳುವುದರಿಂದ ಮಾಲಿನ್ಯ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳು ತ್ಯಾಜ್ಯ ವಸ್ತುಗಳ ನಿರ್ವಹಣೆ ಘಟಕದ ಸ್ಥಳ ಪರಿಶೀಲನೆ ನಡೆಸಲು ತಾಲೂಕಿಗೆ ಆಗಮಿಸಲಿದ್ದು, ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆಗೆ ಅವಕಾಶ ನೀಡದಂತೆ ಮನವಿ ಮಾಡಲು ತಾಲೂಕಿನ ಎಲ್ಲ ಕನ್ನಡ ಪರ ಸಂಘಟನೆಗಳು, ಜನಪ್ರತಿನಿಧಿಗಳು ಆಂದೋಲನ ರೀತಿಯಲ್ಲಿ ಭಾಗವಹಿಬೇಕೆಂದು ಮನವಿ ಮಾಡಿದರು. ಪಂಚಾಯ್ತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ಕುಮಾರ್, ಸದಸ್ಯರಾದ ಚಿನ್ನಸ್ವಾಮಿಗೌಡ, ಮಲ್ಲಿಕಾರ್ಜುನಪ್ಪ, ವೆಂಕಟೇಶಪ್ಪ, ನಾಗರಾಜ್, ಸಿ.ಎ. ನಾರಾಯಣಸ್ವಾಮಿ ಸೇರಿದಂತೆ ಪಂಚಾಯ್ತಿಯ ಎಲ್ಲ 16 ಸದಸ್ಯರು ಹಾಗೂ ಗ್ರಾಮದ ಮುಖಂಡರು ಇದ್ದರು.

ಪರಿಸರವಾದಿಗಳ ಆಕ್ಷೇಪ
ಮಾಲೂರು:
ತಾಲೂಕಿನ ಪಿಚ್ಚಗುಂಟ್ರಹಳ್ಳಿ-ಮಾದನಹಟ್ಟಿ ಗ್ರಾಮದ 35 ಎಕರೆ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕಕ್ಕೆ ಅನುಮತಿ ನೀಡಬಾರೆದೆಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಅಧಿಕಾರಿ ರಾಮಯ್ಯ ಮನವಿ ಮಾಡಿದ್ದಾರೆ.
ಅವರು ಕನ್ನಡ ಪ್ರಭದೂಂದಿಗೆ ಮಾತನಾಡಿ, ಘಟಕ ರಾಜ್ಯದ ವಿದಧ ಉದ್ದಿಮೆಗಳಾದ ರಾಸಾಯನಿಕ ಗೂಬ್ಬರ, ಕ್ರಿಮಿನಾಶಕ, ಪೆಟ್ರೋಕೆಮಿಕಲ್ಸ್, ಮೆಟಲ್‌ಲೆರಜಿಕಲ್ ಹಾಗೂ ಇತರೆ ಉದ್ದಿಮೆಗಳಿಂದ ಉತ್ಪತ್ತಿಯಾಗುವ ಅಪಾಯಕಾರಿ ತ್ಯಾಜ್ಯವಸ್ತುಗಳನ್ನು ತಂದು ಶೇಖರಣೆ ಮಾಡಿ ದಿನ ನಿತ್ಯ ಹಗಲು ರಾತ್ರಿ ಸುಡಲಿದೆ. ಇದರಿಂದ ಬರುವ ಬೂದಿ ಹಾಗೂ ಇತರೆ ತ್ಯಾಜ್ಯವಸ್ತುಗಳನ್ನು ಸುಮಾರು 20 ಎಕರೆ ಜಾಗದಲ್ಲಿ ಹೊಳಲಿದ್ದು, ಭೂಮಿಯಲ್ಲಿ ಜಲ ಮಾಲಿನ್ಯವಾಗಲಿದೆ ಎಂದರು.
ಅಪಾಯಕಾರಿ ತ್ಯಾಜ್ಯವನ್ನು ಎಷ್ಟು ಉಷ್ಣತೆಯಿಂದ ಸುಟ್ಟರೂ ವಿಷಕಾರಿ ಅನಿಲಗಳು ಉತ್ವತ್ತಿಯಾಗಿ ಸುತ್ತಲ ವಾತಾವರಣಕ್ಕೆ ಸೇರುತ್ತದೆ. ಈ ವಿಷಕಾರಿ ಅನಿಲಗಳಲ್ಲಿ ಪ್ರಮುಖವಾಗಿ ಡ್ಯಾಯಾಕ್ಸಿನ್ ಹಾಗೂ ಪ್ಲೋರಾನ್ ಎಂಬ ಅಪಾಯಕಾರಿ ಅನಿಲಗಳು ಉತ್ಪತ್ತಿಯಾಗಿ ಕ್ಯಾನ್ಸರ್ ಖಾಯಿಲೆಗೆ ಅವಕಾಶ ನೀಡಿದತಾಂಗುತ್ತದೆ ಎಂದರು. ಘಟಕದ ಸುತ್ತಮುತ್ತಲ ಗ್ರಾಮಸ್ಥರು ನರಮಂಡಲ, ಶಾಶ್ವಕೋಶ, ಹೃದಯಸಂಬಂಧಿ ರೋಗಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ ಎಂದರು. ಈ ವಿಷಕಾರಕ ಘಟಕದ ಸ್ಥಾಪನೆಯನ್ನು ತಡೆಬೇಕಾದರೆ ತಾಲೂಕಿನ ಜನತೆ ಒಗಟ್ಟಿನ ಹೋರಾಟ ಮಾಡಬೇಕಾಗಿದೆ. ಜಿಲ್ಲಾಡಳಿತ-ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement