ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿಗಳು ಸಮಾಜ ಸೇವೆಗೆ ಮುಂದಾಗಿ

Srinivasa Murthy VN
Updated On : 20 Oct 2013, 12:43 pm

ಕೆಜಿಎಫ್: ವಿದ್ಯಾರ್ಥಿಗಳು ಗ್ರಾಮವನ್ನು ಸ್ವಚ್ಛಗೊಳಿಸುವ ಮೂಲಕ ಸಮಾಜ ಸೇವೆ ಮಾಡಿದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ ಎಂದು ಮಾಜಿ ಶಾಸಕ ವೈ. ಸಂಪಂಗಿ ತಿಳಿಸಿದರು. ಕ್ಯಾಸಂಬಳ್ಳಿ ಹೋಬಳಿಯ ಕರಡುಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕೆಜಿಎಫ್ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಶಿಕ್ಷಣ ಇಲಾಖೆ ವತಿಯಿಂದ ಒಂದು ವಾರದ ಕಾಲ ನಡೆಯಲಿರುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮತ್ತು ಎನ್‌ಎಸ್‌ಎಸ್ ವಿರ್ದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಿಸುವ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ನೀಡುವುದರ ಮೂಲಕ ಸುಸಜ್ಜಿತ ಗ್ರಾಮ ಹಾಗೂ ಉತ್ತಮ ಪರಿಸರ ರಕ್ಷಿಸಿಸಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳಂದಿಗೆ ಸಹಕರಿಸಬೇಕಾಗಿದೆ ಎಂದು ತಿಳಿಸಿದರು. ಎನ್‌ಎಸ್‌ಎಸ್‌ನ ಶಿಬಿರಾಧಿಕಾರಿ ಜಿ.ಪ್ರಭಾಕರ್‌ರೆಡ್ಡಿ, ಕರಡುಗೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್, ಸಹಕಾರ ನೀಡಿದ ಗೋಪಾಲರೆಡ್ಡಿ, ಹರಿನಾಥ್‌ರೆಡ್ಡಿ, ರಘುರಾಮರೆಡ್ಡಿ, ರಾಮಕೃಷ್ಣಪ್ಪ, ರಾಮಚಂದ್ರ, ಬಲರಾಮ, ಹರಿನಾಥ್, ವೆಂಕಟೇಶಪ್ಪ, ಅಮರನಾರಾಯಣರೆಡ್ಡಿ, ಮುನಿಸ್ವಾಮಿ, ತಾಪಂ ಸದಸ್ಯ ಬಾಬು, ಗ್ರಾಪಂ ಉಪಾಧ್ಯಕ್ಷ ಆನಂದ್, ಮೂರ್ತಿ ಮತ್ತಿತರರು ಈಸಂದರ್ಭದಲ್ಲಿ ಹಾಜರಿದ್ದರು.

ರಸ್ತೆ ಉಬ್ಬುಗಳಿಗೆ ಜೀಬ್ರಾ ಗ್ಲಾಸ್ ಹಾಕಲು ಆಗ್ರಹ
ಚಿಂತಾಮಣಿ:
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಕಿರುವ ರಸ್ತೆ ಉಬ್ಬುಗಳ ಮುಂದೆ ಹಾಗೂ ಹಿಂದೆ ಜೀಬ್ರಾ ಗ್ಲಾಸ್(ಉಬ್ಬು ಇರುವ ಚಿಹ್ನೆ) ಸಂಚಾರಿ ನಿಯಮಗಳ ಬಗ್ಗೆ ಮನವರಿಕೆ ಮಾಡದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ  ವಾಹನ ಸವಾರರು ಅಸಮದಾನ ವ್ಯಕ್ತಪಡಿಸಿದ್ದಾರೆ. ಪಟ್ಟಣ ಜಿಲ್ಲೆಯಲ್ಲಿ ಅಧಿಕ ಜನಸಂಖ್ಯೆ ಹೊಂದಿದ್ದು, ಇಲ್ಲಿಗೆ ಹೊರ ರಾಜ್ಯಗಳಿಂದ ಬಂದು ಹೋಗುವ ವಾಹನಗಳಿಗೆ ಕನಿಷ್ಠ ಸಂಚಾರಿ ನಿಯಮಗಳ ನಾಮಫಲಕ ಇಲ್ಲದಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಜನಸಾಮಾನ್ಯರ ಪ್ರಾಣ ಉಳಿಸಲು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಅರ್ಜಿ ಆಹ್ವಾನ
ಶ್ರೀನಿವಾಸಪುರ;
ಪಟ್ಟಣದ ಬಡ ವಯೋವೃದ್ಧರಿಗೆ, ವಿದವೆಯರಿಗೆ ಮತ್ತು ಅಂಗವಿಕಲರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.  22 ರ ಬೆಳಿಗ್ಗೆ 11 ಗಂಟೆಯಿಂದ 3ರ ವೆರೆಗೂ ಪುರಸಭೆ, 23 ರಂದು ರಂಗಾ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 24 ರಂದು ಡಾ. ಜಾಕೀರ ಹುಸೇನ್ ಮೊಹಲ್ಲಾದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ, 25 ರಂದು ಗಫರ್ ಖಾನ್ ಮೊಹಲ್ಲಾದ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರ್ಜಿಗಳನ್ನು ಸ್ವೀಕರಿಸುವುದಾಗಿ ತಹಸೀಲ್ದಾರ್ ಎಚ್. ಜಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement