ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ ಬಸ್ ನಿಲ್ದಾಣದಲ್ಲಿ ಉಡಗಳ ಪತ್ತೆ

Srinivasa Murthy VN
Updated On : 21 Oct 2013, 12:58 pm

ಕೋಲಾರ: ನಗರದ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಭಾನುವಾರ ಹಲ್ಲಿಯ ಜಾತಿಗೆ ಸೇರಿದ ಎಂಟು ದೊಡ್ಡ ಉಡಗಳು ಪತ್ತೆಯಾಗಿದೆ. ಬೆಂಗಳೂರು-ಸಿರಗುಪ್ಪಗೆ ಹೋಗುವ ಬಸ್ಸಿನಲ್ಲಿ ಉಡಗಳನ್ನು ತುಂಬಿದ್ದ ಚೀಲ ಕಾಣಿಸಿದ್ದು ಇದರಿಂದ ಭಯ ಭೀತರಾದ ಪ್ರಯಾಣಿಕರು ಬಸ್ಸಿನ ಚಾಲಕ ಮತ್ತು ನಿರ್ವಹಕರಿಗೆ ತಿಳಿಸಿದ್ದಾರೆ. ಚೀಲ ಅಲುಗಾಡುತ್ತಿದ್ದನ್ನು ಗಮನಿಸಿದ ಜನರು ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಧೈರ್ಯ ಮಾಡಿ ಚೀಲಕ್ಕೆ ಕಟ್ಟಿದ್ದ ದಾರವನ್ನು ಬಿಚ್ಚಿದಾಗ ಉಡಗಳು ಪತ್ತೆಯಾಗಿವೆ.
ತಕ್ಷಣ ಅರಣ್ಯ ಇಲಾಖೆಯವರಿಗೆ ತಿಳಿಸಿದಾಗ ಸಿಬ್ಬಂದಿ ಆಗಮಿಸಿ ಉಡಗಳನ್ನು ಅರಣ್ಯ ಇಲಾಖೆಯ ಕಚೇರಿಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ 8 ಉಡಗಳಿಗೂ ಹಗ್ಗದಿಂದ ಬಿಗಿಯಲಾಗಿತ್ತು. ನಿತ್ರಾಂಣಗೊಂಡಿದ್ದ ಉಡಗಳಿಗೆ ಅರಣ್ಯ ಸಿಬ್ಬಂದಿ ಕೆಲ ಕಾಲ ಆರೈಕೆ ಮಾಡಿದರು. ಕೆಲ ಉಡಗಳು ಉಸಿರಿನ ತೊಂದರೆಯಿಂದ ಬಳಲಿತ್ತು. ಇವುಗಳಿಗೆ ಚಿಕಿತ್ಸೆ ನೀಡಲಾಯಿತು.ಕಾಡಿನಲ್ಲಿ ಕಾಣುವ ಉಡಗಳನ್ನು ಸಾಗಣೆ ಮಾಡಲು ಯತ್ನಿಸಿದವರು ಯಾರು ಎಂದು ಪೊಲೀಸರು ಬಸ್ಸು ನಿಲ್ದಾಣದಲ್ಲಿ ಶೋಧನೆ ಮಾಡಿದರಾದರೂ ಆರೋಪಿಗಳು ಕಾಣಲಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗೀತ ಪರೀಕ್ಷೆ; ಸಾಮೂಹಿಕ ನಕಲು
ಗದಗ: ನಗರದ ಬಾಶೆಲ್ ಮಿಷನ್ ಶಾಲೆಯಲ್ಲಿ ಭಾನುವಾರ ಸಂಗೀತ ಪರೀಕ್ಷೆಯಲ್ಲಿ ಪರೀಕ್ಷಾ ಅಧೀಕ್ಷಕರ ಎದುರೇ ಸಾಮೂಹಿಕ ನಕಲು ನಡೆದಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಾದ ಸಂಬಂಧಿಸಿದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದು, ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯಾದ್ಯಂತ ಭಾನುವಾರ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಸಂಗೀತದ ಲಿಖಿತ ಪರೀಕ್ಷೆಯಿತ್ತು. ಪರೀಕ್ಷಾ ಅಧೀಕ್ಷಕರ ಸಮ್ಮುಖದಲ್ಲಿಯೇ ಈ ರೀತಿ ನಡೆದಿದ್ದು, ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಯಾವುದೇ ಅಂಜಿಕೆಯಿಲ್ಲದೇ ಬೂಟು, ಜೇಬಿನಲ್ಲಿ, ಟೇಬಲ್ ಕೆಳಗೆ ಎಲ್ಲಿಬೇಕಾದಲ್ಲಿ ನಕಲು ಚೀಟಿಗಳನ್ನು ಇಟ್ಟುಕೊಂಡು ಪರೀಕ್ಷೆ ಬರೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement