ಆರ್‌ಎಸ್‌ಎಸ್ ಯುವಕರಿಗೆ ಮಾರ್ಗದರ್ಶಕ
ಕೆಜಿಎಫ್: ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕ್ರಮಗಳು ಮತ್ತು ಆದರ್ಶಗಳು ದೇಶದ ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ಮಾಜಿ ಶಾಸಕ ವೈ. ಸಂಪಂಗಿ ಹೇಳಿದರು. ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ 9 ದಿನಗಳ ಪ್ರಾಥಮಿಕ ಶಿಕ್ಷಾ ವರ್ಗದ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶವನ್ನು ರಕ್ಷಿಸುವುದು ಎಲ್ಲಾ ಭಾರತೀಯರ ಕರ್ತವ್ಯ. ಕಾಂಗ್ರೆಸ್ ನಂತಹ ರಾಜಕೀಯ ಪಕ್ಷಗಳು ಆರ್‌ಎಸ್‌ಎಸ್ ವಿರುದ್ಧ ಟೀಕೆ ಮಾಡಿ ಸಂಘದ ಕಾರ್ಯಕ್ರಮಗಳನ್ನು ತಡೆಯಲು ಕೇಂದ್ರ ಯುಪಿಎ ಸರ್ಕಾರ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ರಾಜಕೀಯ ಸಂಬಂಧವಿಲ್ಲದ ಆರ್‌ಎಸ್‌ಎಸ್ ಸಂಘಟನೆ ದೇಶದ ಶಿಸ್ತು ಹಾಗೂ ಉತ್ತಮ ಸಮಾಜ ನಿರ್ಮಿಸಲು ಮುಂದಾಗಿದೆ ಎಂದರು. ಬಿಜೆಪಿ ನಗರಾಧ್ಯಕ್ಷ ಸುರೇಶ್‌ನಾರಾಯಣ, ಕಾರ್ಯದರ್ಶಿ ಬಾಟಾಗೋಪಾಲ್, ರಾಜ್ಯ ಬಿಜೆಪಿ ಪರಿಷತ್ ಸದಸ್ಯ ನೈನಾರವಿ, ಮುನಿಸ್ವಾಮಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ದತ್ತಾತ್ರೇಯ ರಾಮಚಂದ್ರ, ಶ್ರೀಧರ್ ರಾವ್‌ಸಿಂಧ್ಯೆ, ಮಾಧವನ್, ಶಿವಸುಬ್ರಮಣ್ಯಂ, ರಾಮಕೃಷ್ಣ ಹಾಜರಿದ್ದರು.
ವೆಂಕಟೇಶ್ವರ ಗಣಪ ವಿಸರ್ಜನೆ
ಮಾಲೂರು: ಇಲ್ಲಿನ ಕುಪ್ಪಶೆಟ್ಟಿ ಬಾವಿ ಬಳಿಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದ ಅವರಣದಲ್ಲಿ ಕನ್ನಡ ಅಭಿಮಾನಿ ಗೆಳಯರ ಬಳಗ ಪ್ರತಿಷ್ಠಾಪಿಸಿದ 41 ದಿನಗಳ ವೆಂಕಟೇಶ್ವರ ಅಲಂಕೃತ ಗಣಪನನ್ನು ಸೋಮವಾರ ಅದ್ಧೂರಿ ಮೆರವಣಿಗೆ ಮೂಲಕ ವಿರ್ಸಜಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ವಿನಾಯಕ ಗೆಳಯರ ಬಳಗ ಗಣೇಶ ವಿಸರ್ಜನೆಯ ಅಂಗವಾಗಿ ಪಟ್ಟಣದಾದ್ಯಂತ ಹತ್ತು ಸಾವಿರ ತಿರುಪತಿ ಲಾಡುಗಳನ್ನು ವಿತರಿಸಿದರು. ಹೈದ್ರಬಾದ್‌ನಿಂದ ತಂದಿದ್ದ 21 ಅಡಿ ಎತ್ತರ ಗಣೇಶನ ವಿಸರ್ಜನೆ ಮೆರವಣಿಗೆ ವೀಕ್ಷಿಸಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜನತೆ ನಿಂತು ಚಿಕ್ಕ ಕೆರೆಗೆ ಹೂರಟ ಗಣಪನಿಗೆ ಪೊಜೆ ಸಲ್ಲಿಸಿದರು. ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮೆರವಣಿಗೆ ಸಂಜೆ ವೇಳೆಗೆ ಚಿಕ್ಕಕೆರೆಯಲ್ಲಿ ಗಣಪನನ್ನು ವಿರ್ಸರ್ಜಿಸಲಾಯಿತು.