ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಮುಲ್ ಸಂಪನ್ಮೂಲ ವ್ಯಕ್ತಿಗಳ ತರಬೀತಿ ಶಿಬಿರ

Srinivasa Murthy VN
Updated On : 22 Oct 2013, 1:02 am

ಕ.ಪ್ರ.ವಾರ್ತೆ ಚಿಂತಾಮಣಿ ಅ. 21
ಹೈನುಗಾರಿಕೆಯ ಉತ್ಪಾದಕ ರೈತರಿಗೆ ಹೆಚ್ಚು ಆರ್ಥಿಕ ಶಕ್ತಿ ಹೊಂದಲು ಇಂತಹ ತರಬೇತಿ ಶಿಬಿರಗಳು ಬಹಳ ಮುಖ್ಯವೆಂದು ಕೋಮುಲ್ ಅಧ್ಯಕ್ಷ ಗುಡಿಯಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಕೋಲಾರ-ಚಿಕ್ಕಬಳ್ಳಾಪುರ ಕೋಮುಲ್ ಡೈರಿ ವತಿಯಿಂದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ತರಬೀತಿ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ರೈತಾಪಿ ಜನ ಹೈನುಗಾರಿಕೆಯಲ್ಲಿ ಉತ್ತಮ ಹಾಲು ಹಾಗೂ ಉತ್ತಮ ಆರೋಗ್ಯ ಧ್ಯೇಯದೊಂದಿಗೆ ಸಹಕಾರಿ ಸಂಘಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಲು ರೈತರು ಮುಂದಾಗಬೇಕೆಂದು ಹೇಳಿದರು. ಮುಖ್ಯ ಅತಿಥಿ ಕೋಮುಲ್ ನಿರ್ದೇಶಕ ಟಿ.ಎನ್. ರಾಜಗೋಪಾಲ್ ಮಾತನಾಡಿ ಹಾಲು ಉತ್ಪಾದಕ ಸದಸ್ಯರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ರಾಘವೇಂದ್ರ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಚಿಂತಾಮಣಿ ಉಪವಿಭಾಗದ ವ್ಯವಸ್ಥಾಪಕರಾದ ಡಾ. ಪುಣ್ಯಕೋಟಿ, ರವಿಶಂಕರ್ ಹೆಗಡೆ, ಮಂಜುನಾಥ, ಎ.ವಿ. ಶಂಕರರೆಡ್ಡಿ ಸೇರಿದಂತೆ ಇನ್ನು ಹಲವು ಮುಖಂಡರು ರೈತರು ಸಭೆಯಲ್ಲಿ ಭಾಗವಹಿಸಿದರು.

ಕಾಲುಬಾಯಿ ಜ್ವರಕ್ಕೆ ಸೀಮೆ ಹಸು ಸಾವು
ಬಂಗಾರಪೇಟೆ: ಕಾಲುಬಾಯಿ ಜ್ವರದಿಂದ ಹಸುವೊಂದು ಮೃತಪಟ್ಟಿದ್ದರೂ ಪಶು ವೈದ್ಯರು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲಿಸದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಹತ್ತಾರು ಹಸುಗಳು ಮೃತಪಟ್ಟಿವೆ, ಈ ಬಗ್ಗೆ ಪಶು ಇಲಾಖೆಯಿಂದ ರೈತರಿಗೆ ತಿಳವಳಿಕೆ ಮೂಡಿಸುವ ಕಾರ್ಯಗಳು ನಡೆದಿಲ್ಲ. ರೈತರು ಪಟ್ಟಣದ ಪಶು ವೈದ್ಯ ಆಸ್ಪತ್ರೆಗೆ ಹೋದರೂ ಅಲ್ಲಿ ವೈದ್ಯರು ಸಕಾಲಕ್ಕೆ ಲಭಿಸುತ್ತಿಲ್ಲ. ಮೃತಪಟ್ಟಿರುವ ಹಸು ಮಾಲೀಕರಿಗೆ ಪಿರಹಾರ ನೀಡುವಂತೆ ಆಗ್ರಹಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement