ಮಹೀಂದ್ರಾ ಏರೋಸ್ಟ್ರಕ್ಚರ್ ಪ್ಲಾಂಟ್ ಉದ್ಘಾಟನೆ
ಕ.ಪ್ರ.ವಾರ್ತೆ ಕೋಲಾರ ಅ. 21
ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ವಿಶೇಷ ಮಾನ್ಯತೆ ಗಳಿಸಬೇಕೆಂಬ ಉದ್ದೇಶದಿಂದ ಮಹೀಂದ್ರಾ ಏರೋಸ್ಪೇಸ್ ಸಂಸ್ಥೆ ಸ್ವೇನ್ ದೇಶದ ಏರೋನೊವಾ ಸಮೂಹದ ಜೊತೆ ತಂತ್ರಜ್ಞಾನ ಪಾಲುದಾರಿಕೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಪ್ರಕಟಿಸಿದರು.
ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಕ್ಷೇತ್ರದಲ್ಲಿ ಮಹೀಂದ್ರಾ ಏರೋಸ್ಪೇಸ್ನಿಂದ ರು. 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಏರೋಸ್ಟ್ರಕ್ಚರ್ ಸ್ಥಾವರದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸುಮಾರು 25 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯದ ಏರೋಸ್ಪೇಸ್ ಸಂಕೀರ್ಣ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು ಸೇವಾ ಆಧಾರಿತವಾದ ಈ ನೂತನ ಸ್ಥಾವರದಲ್ಲಿ ಸಿಎನ್ಸಿ ರೂಟಿಂಗ್, ಸ್ಟ್ರೆಟ್ಚ್ ನಿರ್ಮಾಣ, ಬ್ಲೇಡ್ ಪ್ರಸ್, ಶಾಖೋತ್ಪನ್ನ ಸೌಲಭ್ಯ ಸೇರಿದಂತೆ ದೊಡ್ಡ ಸಂಕೀರ್ಣವಾದ ಪದರು ಷೀಟುಗಳನ್ನು ಒಳಗೊಂಡ ಮೆಟಲ್ ಬಿಡಿ ಭಾಗಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ಅವಕಾಶ: 5 ಆಕ್ಸಿಸ್ನ ಸಿಎನ್ಸಿ ಮಷಿನ್, ಪೂರ್ಣ ಸ್ವಯಂಚಾಲಿತ ಭೂಮೇಲ್ಮೈಯ ಸಂಸ್ಕರಣ ಮಾರ್ಗ,ಪ್ರೈಮಿಂಗ್ ಮತ್ತು ಪೇಟಿಂಗ್ ಸೌಲಭ್ಯ, ಬಿಡಿಭಾಗಗಳ ಜೋಡಣೆ,10 ಸಾವಿರ ಚದರ ಮೀಟರ್ ವಿಸ್ತೀರ್ಣದ ಪ್ರಮುಖ ಏರ್ ಪ್ರೇಮ್ ಮತ್ತು ಉಪ ಜೋಡಣೆಯ ಸೌಲಭ್ಯ, ಒಇಎಂ ಮತ್ತು ಟೈಯರ್ 1 ರ ಮಿಟಿಗೇಟ್ಗೆ ಸಂಬಂಧಿಸಿದ ಸೌಲಭ್ಯಗಳು ಇದ್ದು ಇವುಗಳು ವೆಚ್ಚ, ನಿಗದಿತ ಕಾಲಮಿತಿ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸಲು ಈ ನೂತನ ಸೌಲಭ್ಯ ಸಿದ್ಧಗೊಂಡಿದೆ ಎಂದು ಏರೋಸ್ಟ್ರಕ್ಚರ್ ಸ್ಥಾವರದ ಸಮಗ್ರ ಮಾಹಿತಿ ಒದಗಿಸಿದರು.
ಹೊಸ ಸ್ಥಾವರದ ಉದ್ಘಾಟನೆ ನೆರವೇರಿಸಿದ ಮಹೀಂದ್ರಾ ಸಿಸ್ಟೆಕ್ ಅಧ್ಯಕ್ಷ ಹೇಮಂತ್ ಲುತ್ರಾ ಮಾತನಾಡಿ, ಮಹೀಂದ್ರಾ ಏರೋ ಸ್ಪೇಸ್ ಮತ್ತು ದೇಶಿಯ ಏಕೊ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ನಮ್ಮ ಕನಸನ್ನು ನನಸಾಗಿಸುವುದಕ್ಕೆ ಪ್ರಯತ್ನ ಮುಂದುವರೆದಿದೆ. ಸಂಕೀರ್ಣ, ಬಿಲ್ಡ್ ಪ್ರಿಂಟ್ ಬಿಡಿ ಭಾಗಗಳು, ಜೋಡಣೆ ಕಾರ್ಯಕ್ರಮವನ್ನು ಸ್ಪರ್ಧಾತ್ಮಕ ದರದಲ್ಲಿ ಕೈಗೊಳ್ಳಲಿದ್ದೇವೆ. ನೂತನ ಘಟಕ ಬಹು ಒಇಎಂಗಳಿಗೆ ಸೇವೆ ಒದಗಿಸಲು ಶಕ್ತವಾಗಿದೆ. ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಇರುವ ದಿನಗಳು ಬಿಲ್ಡ್ ಪ್ರಿಂಟ್ನಿಂದ ಭವಿಷ್ಯದಲ್ಲಿ ಡಿಸೈನ್ ಡಿಲೆವರಿ ಹಂತಕ್ಕೆ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಸ್ಟ್ರೇಲಿಯಾದಲ್ಲೂ ಹೂಡಿಕೆ: ಮಹಿಂದ್ರಾ ಏರೋಸ್ಪೇಸ್ ಮೂಲಕ ಮಹಿಂದ್ರಾ ಸಮೂಹ ಯುಟಿಲಿಟಿ ಏರ್ ಕ್ರಾಫ್ಟ್ ಮತ್ತು ಏರೋ ಸಂಕೀರ್ಣಗಳ ಉತ್ಪಾದನೆ ಕ್ಷೇತ್ರ ಪ್ರವೇಶಿದೆ. ಆಸ್ಟ್ರೇಲಿಯಾ ಮೂಲಕ ಏರೋಸ್ಟಾಫ್ ಮತ್ತು ಗಿಪ್ಸ್ ಏರೊ ಸಂಸ್ಥೆಯನ್ನು ಸ್ವಾದೀನ ಪಡೆಯುವ ಮೂಲಕ 2010ರಲ್ಲಿ ಕ್ಷೇತ್ರವನ್ನು ಪ್ರವೇಶಿಸಿದ್ದು ಹೊಸ ಸಾಮರ್ಥ್ಯ ಹೆಚ್ಚಿಸಲು ಭಾರತ ಮತ್ತು ಆಸ್ಟ್ರೇಲಿಯಾ ಎರಡರಲ್ಲೂ ಹೂಡಿಕೆ ಮಾಡಿದೆ ಎಂದರು.
ಸ್ವೇನ್ ದೇಶದ ಏರೋನೊವಾ ಗ್ರೂಪ್ ಅಧ್ಯಕ್ಷ ಇನಕಿ ಗಂದಸೆಗುಯಿ ಅವರು ಮಹೀಂದ್ರಾ ಗ್ರೂಪ್ ಸಮೂಹದ ಜೊತೆ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಒಡಂಬಡಿಕೆಗೆ ಸಂತಸ ವ್ಯಕ್ತಪಡಿಸಿದರಲ್ಲದೆ, ವಿಶ್ವದರ್ಜೆಯ ಗುಣಮಟ್ಟದೊಂದಿಗೆ ಸೇವಾ ಸೌಲಭ್ಯ ಅಭಿವೃದ್ಧಿಪಡಿಸಲು ಅತ್ಯುತ್ತಮ ಭಾರತೀಯ ಪೂರೈಕೆ ವ್ಯವಸ್ಥೆಯ ಬೆಂಬಲವಿದೆ ಎಂದರು.